ಜಿಎಸ್‌ಟಿ ಕುರಿತು ಕಾರ್ಯಾಗಾರ

ಉಡುಪಿ, ಮೇ 28: ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಜಿಎಸ್‌ಟಿ ಕುರಿತ ಕಾರ್ಯಾಗಾರವನ್ನು ಇತ್ತೀಚೆಗೆ ಉಡುಪಿಯಲ್ಲಿ ಆಯೋಜಿಸ ಲಾಗಿತ್ತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಬ್ರಿ ಸುಧೀರ್ ನಾಯಕ್ ವಹಿಸಿದ್ದರು. ಸಂಪನ್ಮೂಲ ವ್ಯಕಿತಿಯಾಗಿ ಚಾರ್ಟಡ್ ಅಕೌಂಟೆಂಟ್ ಸಂಜೀವ ಕುಮಾರ್ ಜಿಎಸ್‌ಟಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದರು. ಬಳಿಕ ಸಂವಾದ ಕಾರ್ಯಕ್ರಮ ಜರಗಿತು.
ಸಂಘದ ಕಾರ್ಯದರ್ಶಿ ಮಟ್ಟಾರು ವಸಂತ ಕಿಣಿ ವಂದಿಸಿದರು. ಯು. ಅಜಿತ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
Next Story





