ಅಂಗರಕರ್ಯ: ಶಿಕ್ಷಕ-ರಕ್ಷಕ ಸಭೆ
ಮೂಡುಬಿದಿರೆ, ಮೇ 28: ಮುಹಿಯುದ್ದೀನ್ ಜುಮಾ ಮಸೀದಿ ಅಂಗರಕರ್ಯ ಇದರ ಅಧೀನದ ಅಸಾಸುಲ್ ಇಸ್ಲಾಂ ಮದರಸದಲ್ಲಿ ಶಿಕ್ಷಕ-ರಕ್ಷಕ ಸಭೆಯು ಜಮಾಅತ್ ಅಧ್ಯಕ್ಷ ನಝೀರ್ ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯೋಪಾಧ್ಯಾಯರಾದ ಹಾರೀಸ್ ದಾರಿಮಿ ದುಆ ನೆರವೇರಿಸಿದರು.
ಅಧ್ಯಾಪಕ ಇಸ್ಮಾಯಿಲ್ ಯಮಾನಿ ಧಾರ್ಮಿಕ ವಿಧ್ಯಾಭ್ಯಾಸದಲ್ಲಿ ಪೋಷಕರು ತಾಳುವ ಗಂಭೀರ ನಿರ್ಲಕ್ಷ್ಯತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಶಬೀರ್ ಅಹ್ಮದ್ ಮಾಹಿತಿ ನೀಡುತ್ತಾ ಕುಂದು-ಕೊರತೆ ಬಗ್ಗೆ ಸಲಹೆ ನೀಡುವಂತೆ ಮನವಿ ಮಾಡಿದರು. ಅಲ್-ಗೌಸಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ಮದರಸ ವಿಧ್ಯಾರ್ಥಿಗಳಿಗೆ ಸಮವಸ್ತ್ರ, ಐ.ಡಿ.ಕಾರ್ಡ್, ಪುಸ್ತಕ, ಆಟದ ಸಾಮಾಗ್ರಿಗಳು ನೀಡುತ್ತಾ ಪ್ರೋತ್ಸಾಹಿಸುತ್ತಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಪಿ.ಸಿ.ಅಹ್ಮದ್, ಅಲ್-ಗೌಸಿಯಾ ಯಂಗ್‌ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಂ.ಮುಸ್ತಫಾ, ಎಸ್ಕೆಎಸ್ಸೆಸ್ಸೆಫ್ ಅಂಗರಕರ್ಯ ಶಾಖಾಧ್ಯಕ್ಷ ಎ.ಎಂ.ರಫೀಖ್ ಉಪಸ್ಥಿತರಿದ್ದರು.
ಮದರಸ ಅಧ್ಯಾಪಕ ನಝೀರ್ ದಾರಿಮಿ ಶಂಭೂರು ಸ್ವಾಗತಿಸಿದರು. ಎಸ್.ಕೆ.ಎಸ್.ಬಿ.ವಿ. ಅಧ್ಯಕ್ಷ ಮುಹಮ್ಮದ್ ಅರ್ಮಾನ್ ವಂದಿಸಿದರು.