ಕೇಂದ್ರ ಸಚಿವ ಮಾಂಕುಶ್ ಮಾಂಡವ್ಯ ಮೇಲೆ ಶೂ ಎಸೆತ

ಹೊಸದಿಲ್ಲಿ, ಮೇ 29: ಕೇಂದ್ರ ಸಚಿವ ಮಾಂಕುಶ್ ಮಾಂಡವ್ಯ ಅವರ ಮೇಲೆ ಗುಜರಾತ್‌ನಲ್ಲಿ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಶೂ ತೂರಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಮಾಂಕುಶ್ ಅವರು ವಲ್ಲಭಾಯ್‌ಪುರ ನಗರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾಗ ಅವರ ಮೇಲೆ ಹಾದಿಕ್ ಪಟೇಲ್ ನೇತೃತ್ವದ ಪಿಎಎಎಸ್ ಕಾರ್ಯಕರ್ತರು ಶೂ ತೂರಿದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಕಾಲೇಜು ವಿದ್ಯಾರ್ಥಿ 20ರ ಹರೆಯದ ವಿದ್ಯಾರ್ಥಿ ಭವೇಶ್ ಸೊನಾನಿ ಎಂಬಾತನನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





