ಸಹರಾನ್ ಪುರ : ಠಾಕೂರರಿಗೆ ಕೆಲಸಕ್ಕೆ ಜನ ಇಲ್ಲ, ದಲಿತರಿಗೆ ಕೆಲಸ ಇಲ್ಲ !

ಸಹರಾನ್ ಪುರ, ಮೇ. 29: ಪಶ್ಚಿಮ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಠಾಕೂರರ ಹಾಗೂ ದಲಿತರ ನಡುವಣ ಜಾತಿ ಸಂಘರ್ಷದಿಂದಾಗಿ ಈಗ ಅಲ್ಲಿ ಎಲ್ಲವೂ ಮೊದಲಿನಂತಿಲ್ಲವಾಗಿದೆ. ಠಾಕೂರರಿಗೆ ಕೆಲಸಕ್ಕೆ ಜನ ಇಲ್ಲವಾದರೆ ದಲಿತರಿಗೆ ಕೆಲಸವೇ ಇಲ್ಲದಂತಾಗಿದೆ.
ಈ ಸಂಘರ್ಷಗಳ ನಂತರ ದಲಿತರು ಠಾಕೂರರಿಗೆ ಕೆಲಸ ಮಾಡಲು ಒಪ್ಪುತ್ತಿಲ್ಲ ಹಾಗೂ ಇದೇ ಕಾರಣದಿಂದಾಗಿ ಉದ್ಯೊಗಗಳನ್ನು ಕಳೆದುಕೊಂಡಿದ್ದರೆ, ಠಾಕೂರರಿಗ ತಮಗೆ ಕೆಲಸಕೆ ದಲಿತರು ಬೇಡ ಎಬ ಭಾವನೆ ಮೂಡಿದೆ.
ಆದರೆ ಈ ಸಂಘರ್ಷಗಳಿಗಿಂತ ಮುಂಚೆ ಠಾಕೂರರು ಸುಲಭವಾಗಿ ದಲಿತರನ್ನು ಕೆಲಸಕ್ಕೆ ನೇಮಿಸಬಹುದಾಗಿತ್ತು ಆದರೆ ಈಗ ಅವರು ಹೊರಗಿನವರನ್ನು ಕೆಲಸಕ್ಕಾಗಿ ಹುಡುಕಾಡುವ ಪ್ರಮೇಯ ಬಂದೊದಗಿದೆ.
ಶಬ್ಬರಿಪುರದಲ್ಲಿ ಮೇ 5ರಂದು ನಡೆದ ಸಂಘರ್ಷದಲ್ಲಿ ದಲಿತರ ಸುಮಾರು 50ಕ್ಕೂ ಅಧಿಕ ಮನೆಗಳನ್ನು ಠಾಕೂರರು ಬೆಂಕಿ ಹಚ್ಚಿಸಿ ನಾಶಗೈದಿದ್ದರೆಂದು ಆರೋಪಿಸಲಾಗಿತ್ತು. ಠಾಕೂರ ಸಮುದಾಯಕ್ಕೆ ಸೇರಿದ ಒಬ್ಬ ಯುವಕ ಸಂಘರ್ಷಗಳಲ್ಲಿ ಸಾವನ್ನಪ್ಪಿದ ನಂತರ ಈ ಘಟನೆ ನಡೆದಿತ್ತು.
ಸಹರಾನ್ ಪುರದ ಬಿಜೆಪಿ ಸಂಸದ ರಾಘವ ಲಖನ್‌ಪಲ್ ಅವರು ದತ್ತು ತೆಗೆದುಕೊಂಡಿರುವ ಈ ಗ್ರಾಮದ ಸುಮಾರು 4000 ಜನಸಂಖ್ಯೆಯಲ್ಲಿ ಶೇ 40ರಷ್ಟು ದಲಿತರಾಗಿದ್ದರೆ ಅಷ್ಟೇ ಸಂಖ್ಯೆಯ ಠಾಕೂರರೂ ಇದ್ದಾರೆ.







