ಅರ್ನಬ್ ವಿರುದ್ಧ ಶಶಿ ತರೂರ್ ಮಾನನಷ್ಟ ಮೊಕದ್ದಮೆ
ವೈಯಕ್ತಿಕ ದೂಷಣೆ ಬೇಡ , ವಾಸ್ತವಗಳನ್ನು ಮುಂದಿಡಿ : ರಿಪಬ್ಲಿಕ್ ಟಿವಿಗೆ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಮೇ 29: ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಚಾರವಾಗಿ ಅವಮಾನ ಮಾಡಿದ್ದಾರೆ ಎಂದು ದೂರಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪತ್ನಿಯ ಸಾವಿನ ವರದಿ ಪ್ರಸಾರ ಮಾಡುವಲ್ಲಿ ಅವಮಾನ ಮಾಡಿದ್ದಾರೆ. ತನ್ನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಈ ಕಾರಣದಿಂದಾಗಿ 2 ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ತರೂರ್ ಮನವಿ ಮಾಡಿದ್ದಾರೆ.ಇದೇ ವೇಳೆ ರಿಪಬ್ಲಿಕ್ ಟಿವಿಗೆ ವೈಯಕ್ತಿಕ ದೂಷಣೆ ಬೇಡ , ವಾಸ್ತವಗಳನ್ನು ಮುಂದೂಡುವಂತೆ ಹೈಕೋರ್ಟ್ ಆದೇಶ ನೀಡಿದೆ.
Next Story





