ಪಿಎಫ್‌ಐ: 'ರಮಝಾನ್ ಸ್ವಾಗತ’ ಕಾರ್ಯಕ್ರಮ

ಬಂಟ್ವಾಳ, ಮೇ 29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈಕಂಬ ಏರಿಯಾ ವತಿಯಿಂದ 'ರಮಝಾನ್ ಸ್ವಾಗತ’ ಸಾರ್ವಜನಿಕ ದೀನಿ ಸಂದೇಶ ಕಾರ್ಯಕ್ರಮ ಪರ್ಲಿಯಾದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್‌ಐ ಕೈಕಂಬ ಏರಿಯಾ ಅಧ್ಯಕ್ಷ ಅಕ್ಬರ್ ಅಲಿ ವಹಿಸಿದ್ದರು. ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಸಿದ್ದೀಕ್ ಕಲ್ಲಡ್ಕ ರಮಝಾನ್ ಸಂದೇಶ ನೀಡಿದರು. ಪಿಎಫ್‌ಐ ಕೈಕಂಬ ಏರಿಯಾ ಸದಸ್ಯ ರಹಿಮಾನ್ ಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





