ಶಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮಂಜೇಶ್ವರ: ರಮಝಾನ್ ಕಾರ್ಯಕ್ರಮ

ಮಂಜೇಶ್ವರ, ಮೇ 29: ಮರ್ ಹಬಾ ಯಾ ಶಹರ ರಮಝಾನ್ ಕಲಿಯಿರಿ, ಕಲಿಸಿರಿ, ಇಹಪರ ವಿಜಯಗೊಳಿಸಿರಿ ಎಂಬ ವಾಕ್ಯಾನ ದೊಂದಿಗೆ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮಂಜೇಶ್ವರ ಇದರ ಆಶ್ರಯದಲ್ಲಿ ಐದು ದಿನಗಳಲ್ಲಾಗಿ ನಡೆಯುವ ರಮಳಾನ್ ಪ್ರಭಾಷಣೆಗೆ ಚಾಲನೆ ದೊರಕಿತು.
ರವಿವಾರ ಬೆಳಗ್ಗೆ ಉದ್ಯಾವರ ರಫಾ ಸಭಾಂಗಣದಲ್ಲಿ ಅಬೂಬಕರ್ ಹಾಜಿ ಮಾಹಿನ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಎರಿಯಾಲ್ ಮುದರ್ರಿಸ್ ಎಂ ಪಿ ಮುಹಮ್ಮದ್ ಸಹದಿ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಬದ್ರುದ್ದೀನ್ ತಂಙಲ್, ಸೈಫುಲ್ಲ ತಂಙಲ್, ಉಸ್ಮಾನ್ ಹಾಜಿ ಕರೋಡಾ, ಅಬ್ದುಲ್ ರಹ್ಮಾನ್ ಯು ಎಚ್, ಯು ಟಿ ಮೊಹಮ್ಮದ್ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.
ಮೇ 29ರಿಂದ ನಡೆಯಲಿರುವ ರಮಝಾನ್ ಪ್ರಭಾಷಣೆಯಲ್ಲಿ ಹಲವು ಪಂಡಿತ ಶಿರೋಮಣಿಗಳು ಭಾಗವಹಿಸಲಿದ್ದಾರೆ. ಜೂ. 1 ರಂದು ಮಜ್ಲಿಸುನ್ನೂರು ಹಾಗೂ ಸಮಾರೋಪ ಸಮಾರಂಭ ಹಾಗೂ ಇಫ್ತಾರ್ ಕೂಟ ನಡೆಯಲಿದೆ.
ಈ ಸಂಘಟನೆಯು ಕಳೆದ ಮೂರು ವರ್ಷಗಳಿಂದ ಬಡ , ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಅವರಿಗೆ ರಮಝಾನ್ ಕಿಟ್ ಗಳನ್ನು ವಿತರಿಸುತ್ತಾ ಬಂದಿದೆ. ಎನ್ ಕೆ ಉಮರುಲ್ ಫಾರೂಕ್ ಸ್ವಾಗತಿಸಿ, ಯು ಎ ಮೊಯ್ದಿನ್ ಹಾಜಿ ಕುನ್ನಿಲ್ ವಂದಿಸಿದರು.





