ಮೇ 30: ನೀರು ವಿತರಣೆ ಸ್ಥಗಿತ
ಮಂಗಳೂರು, ಮೇ 29: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಿಂದ 18 ಎಂ.ಜಿ.ಡಿ. ನೀರನ್ನು ಪೂರೈಸುವ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ ಕೊಟ್ಟಾರ ಚೌಕಿ ಬಳಿ ಸೋರುವಿಕೆ ಉಂಟಾಗಿದ್ದು, ಸದ್ರಿ ಕೊಳವೆ ದುರಸ್ತಿ ಕಾರ್ಯವನ್ನು ಮೇ 30ರಂದು ಪೂರ್ವಾಹ್ನ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಸದ್ರಿ ಅವಧಿಯಲ್ಲಿ ಮಂಗಳೂರು ನಗರ ಭಾಗಶಃ ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರಪಾಲಿಕೆಯ ಕಾರ್ಯಪಾಲಕ ಅಭಿಯಂತರರು, ವಿಭಾಗ-2 ಇವರ ಪ್ರಕಟನೆ ತಿಳಿಸಿದೆ.
Next Story





