ಅಸಭ್ಯ ಸಂಭಾಷಣೆ ಪ್ರಕರಣ ಕೇರಳದ ಮಾಜಿ ಸಚಿವರ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ, ಮೇ 29: ಮಹಿಳೆಯೊಂದಿಗೆ ಫೋನಿನಲ್ಲಿ ಅಸಭ್ಯವಾಗಿ ಸಂಭಾಷಣೆ ನಡೆಸಿದ ಆರೋಪದಲ್ಲಿ ಕೇರಳದ ಮಾಜಿ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಜುಲೈ 28ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಶಶೀಂದ್ರನ್ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ಅಶ್ಲೀಲ, ಅಸಭ್ಯ ಸಂಭಾಷಣೆಯನ್ನು ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ಮಾರ್ಚ್‌ನಲ್ಲಿ ಪ್ರಸಾರವಾಗಿತ್ತು. ಮರುದಿನ ಶಶೀಂದ್ರನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಈ ಪ್ರಕರಣದ ಕುರಿತು ಶಶೀಂದ್ರನ್ ತನಗೆ ಆಗಿಂದಾಗ್ಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಟಿವಿ ಚಾನೆಲ್‌ನ ಮಹಿಳಾ ಉದ್ಯೋಗಿಯೋರ್ವರು ದೂರು ನೀಡಿದ್ದರು.
Next Story





