ಬೈಕ್‌ಗೆ ಲಾರಿ ಢಿಕ್ಕಿ: ಇಬ್ಬರು ಮೃತ್ಯು
ಮಂಗಳೂರು, ಮೇ 29: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಯುವಕರಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಯುವಕರನ್ನು ಫಜೀರ್‌ನ ನಿವಾಸಿ ರಾಕಿ ಡಿಸೋಜಾ ಮತ್ತು ರುಫಿನ್ ಡಿಸೋಜಾ ದಂಪತಿಯ ಪುತ್ರ ರೊನಾಲ್ಡ್ (28) ಮತ್ತು ಬೊಂದೇಲ್‌ನ ಸೆಬೆಸ್ಟಿಯನ್ ಡಿಸೋಜಾ ಮತು ಸಿಲಿನಂ ಡಿಸೋಜಾ ದಂಪತಿಯ ಪುತ್ರ ರೋಶ್ವಿನ್ ಜಾಕ್ಸನ್ ಡಿಸೋಜಾ (21) ಎಂದು ಗುರುತಿಸಲಾಗಿದೆ.
ಬೈಕ್‌ಗೆ ಢಿಕ್ಕಿ ಹೊಡೆದ ಲಾರಿ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ. ಮೃತರ ಪೈಕಿ ರೊನಾಲ್ಡ್ ದುಬೈಯಲ್ಲಿ ಲಾಜೆಸ್ಟಿಕ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಘಟನೆ ನಡೆದ ದಿನವೇ ಮದುವೆ ನಿಶ್ಚಿತಾರ್ಥ ಆಗಿತ್ತು ಎಂದು ಮೂಲಗಳು ತಿಳಿಸಿವೆ.
ರೋಶ್ವಿನ್ ಬೊಂದೇಲ್‌ನಲ್ಲಿ ಎಲೆಕ್ಟ್ರಿಶಿಯನ್ ವೃತ್ತಿಯನ್ನು ಮಾಡಿಕೊಂಡಿದ್ದು, ಇಬ್ಬರೂ ಸಂಬಂಧಿಕರಾಗಿದ್ದಾರೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





