ಅಂಗಡಿ ಮಾಲಕನಿಗೆ ಚೂರಿ ಇರಿತ: ಆರೋಪಿಯ ಬಂಧನ
ಕೊಣಾಜೆ, ಮೇ 29: ಹರೇಕಳದಲ್ಲಿ ಅಂಗಡಿ ಮಾಲಕರೊಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹರೇಕಳ ನಿವಾಸಿ ಮುಹಮ್ಮದ್ ಅಶ್ರಫ್ (24) ಎಂದು ಗುರುತಿಸಲಾಗಿದೆ.
ಹರೇಕಳದ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರು ಹರೇಕಳದಲ್ಲಿ ಅಂಗಡಿಯೊಂದನ್ನು ಹೊಂದಿದ್ದು, ಕೆಲವು ದಿನಗಳ ಹಿಂದೆ ಆರೋಪಿ ಅಶ್ರಫ್ ಅಂಗಡಿ ಮಾಲಕ ಅಬ್ದುಲ್ ರಹ್ಮಾನ್ ಎಂಬವರಿಗೆ ಚೂರಿಯಿಂದ ಇರಿದಿದ್ದ. ಇದರಿಂದ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹ್ಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಶ್ರಪ್ ನನ್ನು ಸೋಮವಾರ ಪೊಲೀಸರು ಬಂಧಿಸಿದ್ದು, ಈತ ವೈಯ್ಯಕ್ತಿಕ ದ್ವೇಷದಿಂದ ಅಬ್ದುಲ್ ರಹ್ಮಾನ್ ರಿಗೆ ಚೂರಿಯಿಂದ ಇರಿದಿದ್ದ ಎಂದು ತಿಳಿದು ಬಂದಿದೆ.
Next Story





