Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತೆರೆಯಬೇಕಾದುದು ಗೋಶಾಲೆಗಳನ್ನಲ್ಲ, ಸರ್ವ...

ತೆರೆಯಬೇಕಾದುದು ಗೋಶಾಲೆಗಳನ್ನಲ್ಲ, ಸರ್ವ ಮಕ್ಕಳಿಗೆ ಸರಕಾರಿ ಶಾಲೆಗಳನ್ನು

ವಾರ್ತಾಭಾರತಿವಾರ್ತಾಭಾರತಿ30 May 2017 12:25 AM IST
share
ತೆರೆಯಬೇಕಾದುದು ಗೋಶಾಲೆಗಳನ್ನಲ್ಲ, ಸರ್ವ ಮಕ್ಕಳಿಗೆ ಸರಕಾರಿ ಶಾಲೆಗಳನ್ನು

ಪ್ರತಿಭಟನೆ, ಧರಣಿಗಳ ಉದ್ದೇಶವೇ ಕಿವುಡು ಸರಕಾರಕ್ಕೆ ತಮ್ಮ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಮುಟ್ಟಿಸುವುದಾಗಿದೆ. ಇತ್ತೀಚೆಗೆ ತಮಿಳುನಾಡಿನ ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ತಮ್ಮದೇ ಮೂತ್ರವನ್ನು ಕುಡಿದು ಮಾಧ್ಯಮಗಳಲ್ಲಿ ಸುದ್ದಿಯಾದರು. ವರ್ಷಗಳ ಹಿಂದೆ ರಾಜ್ಯದಲ್ಲಿ, ಭಂಗಿ ಸಮುದಾಯದ ಜನರು ಬಹಿರಂಗವಾಗಿ ಮಲದ ನೀರನ್ನು ಮೈಮೇಲೆ ಸುರಿದುಕೊಂಡು ಇಡೀ ಸರಕಾರವನ್ನು ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದರು. ಇದೀಗ ಎರಡು ದಿನಗಳ ಹಿಂದೆ ಇನ್ನೊಂದು ಬಗೆಯ ಧರಣಿ, ಪ್ರತಿಭಟನೆಗಳಿಗೆ ದೇಶ ಸಾಕ್ಷಿಯಾಯಿತು.

ಗೋಮಾರಾಟಕ್ಕೆ ಸಂಬಂಧಪಟ್ಟಂತೆ ಅತ್ಯಂತ ಅಸಂಬದ್ಧ, ಅವೈಜ್ಞಾನಿಕ ರೈತ ವಿರೋಧಿ ಕಾನೂನೊಂದನ್ನು ಸರಕಾರ ಜಾರಿಗೊಳಿಸಿದಾಗ ಗೋಮಾಂಸ ಆಹಾರ ಸೇವನೆಯನ್ನು ಕೆಲವು ರಾಜ್ಯಗಳು ಸಾರ್ವಜನಿಕವಾಗಿ ಉತ್ಸವ ರೂಪದಲ್ಲಿ ಆಚರಿಸಿ ಕೇಂದ್ರ ಸರಕಾರಕ್ಕೆ ತಮ್ಮ ಭಾವನೆಗಳನ್ನು ತಲುಪಿಸುವ ಪ್ರಯತ್ನವನ್ನು ಮಾಡಿದವು. ಪಶ್ಚಿಮ ಬಂಗಾಳ, ಅರುಣಾಚಲ, ಮಣಿಪುರ, ಪುದುಚೇರಿ, ತಮಿಳುನಾಡು, ಗೋವಾ, ಕೇರಳದಂತಹ ರಾಜ್ಯಗಳು ಇಂತಹ ಪ್ರತಿಭಟನೆಯ ಮೂಲಕ ಸರಕಾರದ ಕಾನೂನನ್ನು ತೀವ್ರವಾಗಿದೆ ವಿರೋಧಿಸಿದವು. ಗ್ರಾಮೀಣ ಪ್ರದೇಶದ ರೈತರನ್ನು ಬೀದಿಗೆ ತಳ್ಳುವ, ಬಡವರ ಕೈಯಿಂದ ಅವರ ಆಹಾರವನ್ನು ಕಿತ್ತುಕೊಳ್ಳುವ ಈ ಆತ್ಮಹತ್ಯಾಕಾರಕವಾದ ಕಾನೂನಿನ ವಿರುದ್ಧ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಕೇರಳದ ಒಂದೆಡೆ ಸಾರ್ವಜನಿಕವಾಗಿ ಗೋವನ್ನು ಹತ್ಯೆಗೈದು, ಅದರ ಮಾಂಸವನ್ನು ಜನರು ಅಡುಗೆ ಮಾಡಿ ಹಂಚಿಕೊಂಡು ತಿಂದರು. ಅವರು ಅಂತಹದೊಂದು ಪ್ರತಿಕ್ರಿಯೆಯನ್ನು ಯಾಕೆ ವ್ಯಕ್ತಪಡಿಸಿದರು ಎನ್ನುವುದು ಈ ಸಂದರ್ಭದಲ್ಲಿ ನಮಗೆ ಮುಖ್ಯವಾಗಬೇಕು.

ಆದರೆ ಇಂತಹದೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಾಕ್ಷಣ ದೇಶದ ಕೆಲವು ಮಾಧ್ಯಮಗಲು ಒಮ್ಮೆಲೇ ಎಚ್ಚೆತ್ತು ‘‘ಕ್ರೌರ್ಯ, ಅಮಾನವೀಯ, ಬಾರ್ಬರಿಕ್, ಅಮಾನುಷ’’ ಎಂದೆಲ್ಲ ಬರೆಯತೊಡಗಿದವು. ಪ್ರಗತಿಪರರಲ್ಲಿಯೂ ಬಹುತೇಕ ಮೃದು ಮಾನವೀಯವಾದಿಗಳು ‘‘ಪ್ರತಿಭಟನೆಯ ದಾರಿ ಇದಲ್ಲ’’ ಎಂದು ಚರ್ಚೆಯನ್ನೇ ವಿಷಯಾಂತರಗೊಳಿಸಲು ತೊಡಗಿದರು. ಅಂತಿಮವಾಗಿ ಕಾಂಗ್ರೆಸ್‌ನ ಮುಖಂಡ ರಾಹುಲ್ ಗಾಂಧಿಯವರೇ ಕಂಗಾಲಾಗಿ ‘‘ಗೋ ಹತ್ಯೆ ಮಾಡಿದವರಿಗೂ ನಮಗೂ ಸಂಬಂಧವಿಲ್ಲ’’ ಎಂಬ ಹೇಳಿಕೆಯನ್ನು ನೀಡಬೇಕಾಯಿತು.

‘‘ಇಂದು ಚರ್ಚೆ ನಡೆಯಬೇಕಾದುದು ಜಾರ್ಖಂಡ್‌ನಲ್ಲಿ ಸಾರ್ವಜನಿಕವಾಗಿ ಎಂಟು ಅಮಾಯಕರನ್ನು ಥಳಿಸಿ ಕೊಂದ ಘಟನೆಯ ಕುರಿತಂತೆಯೇ ಹೊರತು, ಸಾರ್ವಜನಿಕವಾಗಿ ಗೋ ಹತ್ಯೆ ನಡೆಸಿದ ಕುರಿತಂತೆ ಅಲ್ಲ’’ ಎಂದು ಹೇಳುವ ವಿವೇಕ, ಮುತ್ಸದ್ದಿತನ ಅವರಲ್ಲಿರಲಿಲ್ಲ. ಇಷ್ಟಕ್ಕೂ ಈ ದೇಶದಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳ ಹತ್ಯೆಯೇ ನಡೆದಿಲ್ಲ ಎನ್ನುವಂತೆ ವರ್ತಿಸಿ, ಕೆಲವರು ಚರ್ಚೆಯ ದಿಕ್ಕನ್ನು ಬದಲಿಸಲು ಮುಂದಾದುದು ವಿಶೇಷ. ಜಾತ್ರೆಗಳಲ್ಲಿ, ಹಬ್ಬ, ಉತ್ಸವಗಳಲ್ಲಿ ಇಂತಹ ಹತ್ಯೆಗಳು, ಸಾರ್ವಜನಿಕ ಬಾಡೂಟಗಳು ತೀರಾ ಸಹಜ.

ಹೀಗಿರುವಾಗ, ಪ್ರತಿಭಟನಾಕಾರರು ರೈತರ ಸಾಮೂಹಿಕ ಹತ್ಯೆಗೆ ಪ್ರೇರೇಪಿಸುವ ಕಾನೂನನ್ನು ವಿರೋಧಿಸಿ ಗೋಮಾಂಸ ಸೇವಿಸಿದರೆ ಅದು ಹೇಗೆ ಅಮಾನವೀಯ ಮತ್ತು ಬರ್ಬರವಾಗುತ್ತದೆ? ಇಷ್ಟಕ್ಕೂ ಸರಕಾರ ನೂತನವಾಗಿ ಜಾರಿಗೆ ತಂದಿರುವ ಕಾನೂನು ಗ್ರಾಮೀಣ ಪ್ರದೇಶದ ದನ ಸಾಕುವ ರೈತರನ್ನು ನೇರವಾಗಿ ಕಸಾಯಿ ಖಾನೆಗೆ ಒಯ್ದು ಬಲಿಕೊಡುವುದಕ್ಕೆ ನಿರ್ದೇಶಿಸುತ್ತದೆ. ಈ ಕಾನೂನಿನ ಪ್ರಕಾರ ಅಧಿಕೃತವಾದ ಬೃಹತ್ ಫಾರ್ಮ್ ಗಳಿಗೆ, ಲೈಸನ್ಸ್‌ಗಳಿರುವ ಸಂಸ್ಥೆಗಳಿಗೆ ಮಾತ್ರ ನಿಷ್ಪ್ರಯೋಜಕ ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವ ಹಕ್ಕುಗಳಿರುತ್ತವೆ. ಸೂಕ್ತವಾದ ಲೈಸನ್ಸ್ ಗಳನ್ನು ಹೊಂದಿರದ ರೈತ ತನ್ನ ಹಟ್ಟಿಯನ್ನೇ ಮುಚ್ಚಬೇಕಾದಂತಹ ಸನ್ನಿವೇಶವಿದೆ. ಒಂದು ರೀತಿಯಲ್ಲಿ ಇಡೀ ಗ್ರಾಮೀಣ ರೈತರನ್ನೇ ತನ್ನ ಕಾನೂನಿನ ಕತ್ತಿಯ ಮೂಲಕ ಸಾರ್ವಜನಿಕವಾಗಿ ಹತ್ಯೆ ಮಾಡಲು ಸರಕಾರ ಹೊರಟಿದೆ.

ಆದರೆ, ಮಾಧ್ಯಮಗಳಿಗೆ ಮಾತ್ರ, ಕೇರಳದ ಮೂಲೆಯಲ್ಲಿ ಹತ್ತಿಪ್ಪತ್ತು ಮಂದಿ ಸೇರಿ ಒಂದು ದನವನ್ನು ಕೊಯ್ದು ಸಾರು ಮಾಡಿ ತಿಂದಿರುವುದು ಆತಂಕದ ಸುದ್ದಿಯಾಗಿದೆ. ಹೇಗೆ ಮಾಧ್ಯಮಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡು ಬಡವರ ಬದುಕನ್ನು ನೋಡುತ್ತಿವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇಂದು ದೇಶದಲ್ಲಿ ನಡೆಯುತ್ತಿರುವ ಮನುಷ್ಯರ ಬರ್ಬರ ಹತ್ಯೆಗಳಿಗೆ ದೇಶದ ವೌನ ಪ್ರತಿಕ್ರಿಯೆಯನ್ನು ಗಮನಿಸಿದರೆ, ಇಲ್ಲಿ ಪ್ರಾಣಿ, ಪಕ್ಷಿಗಳ ಹತ್ಯೆಗೆ ತೋರಿಸುವ ಮರುಕ ಅದೆಷ್ಟು ಆಷಾಢಭೂತಿತನದಿಂದ ಕೂಡಿದೆ ಎನ್ನುವುದು ಅರ್ಥವಾಗಿ ಬಿಡುತ್ತದೆ. ಎಂಟು ಮಂದಿಯನ್ನು ಪೊಲೀಸರ ಸಮ್ಮುಖದಲ್ಲೇ ಗೂಂಡಾಗಳ ಗುಂಪು ಬರ್ಬರವಾಗಿ ಥಳಿಸಿ ಕೊಂದು ಹಾಕುತ್ತದೆ. ಅಮಾಯಕ ಕೈಯೊಡ್ಡಿ ಬೇಡಿದರೂ ಆತನನ್ನು ಯಾವ ಕರುಣೆಯೂ ಇಲ್ಲದೆ ವಿಕೃತ ಆನಂದದ ಜೊತೆಗೆ ಕೊಂದು ಹಾಕುವಾಗ ಕಾನೂನು ವ್ಯವಸ್ಥೆ ನಿರ್ಲಜ್ಜೆಯಿಂದ ಅದನ್ನು ವೀಕ್ಷಿಸುತ್ತಿತ್ತು.

ಗೋವುಗಳನ್ನು ಸಾಕಿ ಬದುಕು ಮುನ್ನಡೆಸುತ್ತಿದ್ದ ಪೆಹ್ಲೂ ಖಾನ್ ಎಂಬ ವೃದ್ಧನನ್ನು, ಗೋರಕ್ಷಕ ವೇಷದಲ್ಲಿದ್ದ ರೌಡಿಗಳು ಕೊಂದು ಹಾಕಿದಾಗಲೂ ಈ ದೇಶದಲ್ಲಿ ‘ಬರ್ಬರ, ಅಮಾನವೀಯ’ ಎಂಬ ಕೂಗು ಎದ್ದಿರಲಿಲ್ಲ. ಉಡುಪಿಯಲ್ಲಿ ಗೋವ್ಯಾಪಾರ ಮಾಡಿ ಬದುಕುತ್ತಿದ್ದ ಕೃಷಿಕನೊಬ್ಬನನ್ನು ಗೂಂಡಾಗಳು ಸಾರ್ವಜನಿಕವಾಗಿ ಥಳಿಸಿ ಕೊಂದಾಗ ಯಾರ ಹೃದಯವೂ ಅದಕ್ಕೆ ಮಿಡಿಯಲಿಲ್ಲ. ಅಂತಹ ಮಂದಿಯೀಗ ಕೇರಳದಲ್ಲಿ ಒಂದು ದನವನ್ನು ಸಾರ್ವಜನಿಕವಾಗಿ ಕೊಂದು, ಮಾಂಸ ಮಾಡಿ ಬೇಯಿಸಿ ತಿಂದಾಗ, ಇಡೀ ಮಾನವೀಯ ಘನತೆಗೇ ಧಕ್ಕೆಯಾಯಿತು ಎಂಬಂತೆ ಮಾತನಾಡುತ್ತಿರುವುದು ರೈತ ವಿರೋಧಿ ರಾಜಕೀಯದ ಇನ್ನೊಂದು ಮುಖವೇ ಹೊರತು ಇನ್ನೇನೂ ಅಲ್ಲ.

ಇದೇ ಸಂದರ್ಭದಲ್ಲಿ ‘‘ಗೋಮಾರಾಟ ನಿಷೇಧ ಮಾಡುವುದಾದರೆ, ಕೇಂದ್ರ ಸರಕಾರವೇ ಗೋಶಾಲೆಗಳನ್ನು ತೆರೆಯಲಿ’’ ಎಂಬ ಸಲಹೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದಾರೆ. ಈ ದೇಶದ ಅಸಂಖ್ಯಾತ ನಿಷ್ಪ್ರಯೋಜಕ ಗೋವುಗಳನ್ನ್ನು ಮೈಮೇಲೆ ಎಳೆದುಕೊಂಡು, ಅದಕ್ಕಾಗಿ ಶಾಲೆಗಳನ್ನು ತೆರೆದು ಸಾಕುವುದರಿಂದ ನಾಡಿನ ಅಭಿವೃದ್ಧಿಗೆ ಏನು ನೀಡಿದಂತಾಯಿತು? ಈ ನಾಡಿನಲ್ಲಿ ಲಕ್ಷಾಂತರ ಜನರು ತಲೆಯ ಮೇಲೆ ಸೂರಿಲ್ಲದೆ, ಉದ್ಯೋಗವಿಲ್ಲದೆ, ಆಹಾರವಿಲ್ಲದೆ ಬದುಕುತ್ತಿರುವ ಸಂದರ್ಭದಲ್ಲಿ ಅವರಿಗೆ ವ್ಯಯವಾಗಬೇಕಾದ ಹಣವನ್ನು ನಿಷ್ಪ್ರಯೋಜಕ ಗೋವುಗಳನ್ನು ಸಾಕಲು ಗೋಶಾಲೆ ತೆರೆಯಲು ವ್ಯಯ ಮಾಡುವ ಪ್ರಯತ್ನ ಈ ನಾಡನ್ನು ಆರ್ಥಿಕವಾಗಿ ಹಲವು ದಶಕಗಳಷ್ಟು ಹಿಂದಕ್ಕೆ ಒಯ್ಯಲಿದೆ.

ಹೈನೋದ್ಯಮದ ಯಶಸ್ವಿಯ ಒಂದು ಭಾಗವಾಗಿದ್ದ ಗೋಮಾಂಸಾಹಾರಿಗಳ ಕೈಯಿಂದ ಆಹಾರವನ್ನು ಕಿತ್ತುಕೊಂಡು, ಬಡವರ ಪಾಲಿಗೆ ಇರುವ ಅಗ್ಗದ ಪೌಷ್ಟಿಕ ಆಹಾರವನ್ನೂ ಇಲ್ಲದಂತೆ ಮಾಡಿ, ಇದೀಗ ನಿಷ್ಟ್ರಯೋಜಕ ಗೋವುಗಳಿಗೆ ಶಾಲೆಗಳನ್ನು ತೆರೆಯಿರಿ ಎಂದು ಹೇಳುವವರು ಆಧುನಿಕ ಭಾರತದ ಹೈನೋದ್ಯಮ ಮತ್ತು ಕೃಷಿ ವಲಯದ ವಿದ್ರೋಹಿಗಳಾಗಿದ್ದಾರೆ. ಅವರಿಗೆ ಅರ್ಥಶಾಸ್ತ್ರವೂ ಗೊತ್ತಿಲ್ಲ, ಧರ್ಮಶಾಸ್ತ್ರವೂ ಗೊತ್ತಿಲ್ಲ. ಆದುದರಿಂದ, ಈ ದೇಶದ ನಾಲ್ಕು ಶೇಕಡ ಜನರ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟು, ಗ್ರಾಮೀಣ ರೈತರ ಹೈನೋದ್ಯಮವನ್ನು ನಾಶಗೊಳಿಸಿ, ಗೋವುಗಳನ್ನು ನಿಷ್ಪ್ರಯೋಜಕ ಮಾಡಿದ ಜನರೇ ಆ ಗೋವುಗಳನ್ನು ಸಾಕುವ ಹೊಣೆಯನ್ನು ಹೊತ್ತುಕೊಳ್ಳಬೇಕು. ಯಾವ ಕಾರಣಕ್ಕೂ ಸರಕಾರ ಅದರ ಹೊಣೆಯನ್ನು ಹೊತ್ತುಕೊಳ್ಳಬಾರದು.

ವೈದಿಕರ ಭಾವನೆಗಳಿಗಾಗಿ ರೈತರು ತಮ್ಮ ಹಟ್ಟಿಗಳನ್ನು ಮುಚ್ಚುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಅದರ ಜೊತೆಗೆ ಜನರ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ನಿಷ್ಪ್ರಯೋಜಕ ದನಗಳನ್ನು ಸಾಕಲು ಗೋಶಾಲೆಗಳನ್ನು ತೆರೆಯಲು ಬಳಸುವುದು ಜನರಿಗೆ, ರೈತರಿಗೆ ಎಸಗುವ ದ್ರೋಹವಾಗಿದೆ. ಗೋವು ದೇವರು ಎನ್ನುವುದು ವೈಯಕ್ತಿಕ ನಂಬಿಕೆ. ಆ ನಂಬಿಕೆಯನ್ನು ಸರಕಾರದ ಮೇಲೆ ಹೇರುವುದು ಯಾವ ರೀತಿಯಲ್ಲೂ ಸಲ್ಲದು. ಇಂದು ರಾಜ್ಯದಲ್ಲಿ ಸಹಸ್ರಾರು ಸರಕಾರಿ ಶಾಲೆಗಳು ಸೂಕ್ತ ಸೌಲಭ್ಯಗಳಿಲ್ಲದೆ ಮುಚ್ಚುತ್ತಿವೆ. ಅಂತಹ ಸರಕಾರಿ ಶಾಲೆಗಳಿಗೆ ಅತ್ಯಾಧುನಿಕ ಸವಲತ್ತುಗಳನ್ನು, ಶಿಕ್ಷಕರನ್ನು ನೀಡಿ ಮೇಲೆತ್ತುವ ಕೆಲಸ ಇಂದು ಅಗತ್ಯವಾಗಿ ನಡೆಯಬೇಕಾಗಿದೆ. ಈ ನಾಡಿನ ಎಲ್ಲ ಜಾತಿ, ಧರ್ಮ, ವರ್ಗದ ಜನರೂ ಜೊತೆಯಾಗಿ ಓದುವ ಶಾಲೆಗಳಾಗಿ ಇವುಗಳನ್ನು ರೂಪಿಸುವ ಮೂಲಕ, ಜಾತಿ, ಧರ್ಮ, ವರ್ಗಗಳನ್ನು ಮೀರಿದ ಹೊಸ ತಲೆಮಾರೊಂದನ್ನು ನಿರ್ಮಾಣ ಮಾಡುವತ್ತ ಚಿಂತನೆ ಮಾಡಬೇಕು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X