ಕುಂಪಲ: ಶಾಲಾ ಬಸ್ಸಿಗೆ ಕಾರು ಢಿಕ್ಕಿ

ಉಳ್ಳಾಲ, ಮೇ 30: ಶಾಲಾ ಬಸ್ಸಿಗೆ ಕಾರೊಂದು ಢಿಕ್ಕಿಯಾದ ಘಟನೆ ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಎರಡು ವಾಹನಗಳು ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕುಂಪಲ ಬೈಪಾಸ್ ಬಳಿ ಬಬ್ಬುಕಟ್ಟೆಯ ಹಿರಾ ಹೆಣ್ಣು ಮಕ್ಕಳ ಪ್ರೌಢಶಾಲಾ ಬಸ್ಸಿನ ಹಿಂಭಾಗಕ್ಕೆ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗದ ಒಂದು ಪಾರ್ಶ್ವ ಜಖಂಗೊಂಡಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
Next Story





