ನೇರಳಕಟ್ಟೆ ಶಾಲಾ ಪ್ರಾರಂಭೋತ್ಸವ

ವಿಟ್ಲ, ಮೇ 30: ನೇರಳಕಟ್ಟೆ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ದಿವಂಗತ ಉರ್ದಿಲಗುತ್ತು ಇಂದುಹಾಸ ರೈ ಸ್ಮರಣಾರ್ಥ ಉರ್ದಿಲಗುತ್ತು ಕೆ. ರಾಮಪ್ರಸಾದ್ ರೈಯವರು ನೀಡಿರುವ ಬರೆಯುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರೋಹಿತಾಶ್ವ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನೆಟ್ಲಮುಡ್ನೂರು ಗ್ರಾಪಂ ಸದಸ್ಯರಾದ ಡಿ. ತನಿಯಪ್ಪಗೌಡ, ಅಬ್ದುಲ್ ಲತೀಫ್ ನೇರಳಕಟ್ಟೆ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಹೆತ್ತವರ ಪಾತ್ರ ಹಾಗೂ ಶಿಕ್ಷಣದ ಮಹತ್ವದ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯೆ ಪ್ರೇಮಾ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಶೀನಪ್ಪ ಮೂಲ್ಯ, ಅಬ್ದುರ್ರಹ್ಮಾನ್ ಪರ್ಲೊಟ್ಟು, ಅಬೂಬಕರ್ ನೇರಳಕಟ್ಟೆ, ಜಯಂತಿ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಕ್ಷಕರಾದ ರೇಶ್ಮಾ, ಸೇಸಪ್ಪ ನಾಕ್, ಜ್ಯೂಲಿಯೆಟ್, ಗೀತಾ ಕೆ.ಡಿ., ಜ್ಯೋತಿ ಹಾಗೂ ಲೀಲಾವತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಐ. ಸ್ವಾಗತಿಸಿದರು. ಸಹಶಿಕ್ಷಕಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







