ದುಬೈ: ನವಜಾತ ಶಿಶುಗಳ ಕಳವು ತಡೆಯಲು ವಿನೂತನ ಉಪಾಯ !

ದುಬೈ, ಮೇ.30: ನವಜಾತ ಶಿಶುಗಳು ಪರಸ್ಪರ ಬದಲಾಗದಿರಲು ಆಸ್ಪತ್ರೆಯಿಂದ ಮಗುವನ್ನು ಕದ್ದೊಯ್ಯದಿರಲು ದುಬೈ ಆರೋಗ್ಯ ಅಥಾರಿಟಿ ಉತ್ಕೃಷ್ಟ ವ್ಯವಸ್ಥೆಮಾಡಿದೆ. ಮಗುವಿನ ಕಾಲಿಗೆ ತಗಲಿಸಿಡಬಹುದಾದ ಈ ಉಪಕರಣ ಒಂದು ಅಲರಾಂ ಆಗಿದೆ.
ಅನುಮತಿಯಿಲ್ಲದೆ ಮಗುವನ್ನು ಯಾರಾದರೂ ಮುಟ್ಟಿದರೆ, ಎತ್ತಿಕೊಳ್ಳಲು ಪ್ರಯತ್ನಿಸಿದರೆ ಅವುಗಳ ಅಮ್ಮಂದಿರನ್ನು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಈ ಉಪಕರಣ ಜಾಗೃತಗೊಳಿಸುತ್ತದೆ. ದುಬೈ ಆರೋಗ್ಯ ಅಥಾರಿಟಿಯ ಅಧೀನದಲ್ಲಿರುವ ದುಬೈ, ಲತೀಫಿಯದ ಆಸ್ಪತ್ರೆಗಳಲ್ಲಿ ಮೊದಲ ಹಂತದಲ್ಲಿ ಈ ಉಪಕರಣಗಳ ಅಳವಡಿಕೆ ನಡೆಯಲಿದೆ. ನವಜಾತ ಶಿಶುವಿನ ರಕ್ತದ ಆಕ್ಸಿಜನ್ ಪ್ರಮಾಣ ಅಳೆಯುವುದಕ್ಕೂ ಅಲರಾಂ ಇರಿಸಿದ ಉಪಕರಣವನ್ನುಅಥಾರಿಟಿ ಅಳವಡಿಸುತ್ತಿದೆ. ಆಕ್ಸಿಜನ್ ಪ್ರಮಾಣ ಕಡಿಮೆಯಾದ ಕೂಡಲೇ ಮಗುವಿನ ಅಮ್ಮಂದಿರಿಗೂ, ಆಸ್ಪತ್ರೆಯ ಸಿಬ್ಬಂದಿಗಳಿಗೂ ಅದು ಸಂದೇಶ ರವಾನಿಸುತ್ತದೆ.
Next Story





