ಐಸಿಎಸ್‌ಸಿ ಪರೀಕ್ಷೆ ಬಾಲಕಿಯರ ಮೇಲುಗೈ: ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ನಜರೆತ್ ಶಾಲೆಯ ವಿದ್ಯಾರ್ಥಿನಿ

ಮೂಡಿಗೆರೆ, ಮೇ.30: ಪ್ರೌಢಶಾಲೆಯ ಐಸಿಎಸ್‌ಸಿ ಪಠ್ಯಕ್ರಮದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಣಕಲ್‌ನ ನಜರೆತ್ ಶಾಲೆಯ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಎಸೆಸೆಲ್ಸಿ ವಿದ್ಯಾರ್ಥಿನಿ ಎಂ.ಎಲ್.ಅಂಶು (ಶೇ. 92) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಕೀರ್ತಿ ತಂದಿದ್ದಾರೆ. ಈಕೆ ಬೇಲೂರು ತಾಲೂಕಿನ ಮಾಡ್ಗೋಡು ಗ್ರಾಮದ ಲಿಂಗೇಗೌಡ ಮತ್ತು ರೇಖಾ ದಂಪತಿಯ ಪುತ್ರಿ.
ಇನ್ನೋರ್ವ ವಿದ್ಯಾರ್ಥಿನಿ ಬಿ.ಎ.ನಕ್ಷತ್ರ (ಶೇ. 88) ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಮೂಡಿಗೆರೆ ತಾಲ್ಲೂಕಿನ ಬೆಳಗೋಡು ಅನಿಲ್ ಗೌಡ ಮತ್ತು ಸುದಾ ದಂಪತಿಯ ಪುತ್ರಿ.
ಮತ್ತೋರ್ವ ವಿದ್ಯಾರ್ಥಿನಿ ಟಿ.ಎಸ್. ಅಕ್ಷಾ (ಶೆ. 87.40) ಪಡೆಯುವ ಮೂಲಕ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಈಕೆ ಮೂಡಿಗೆರೆ ತಾಲ್ಲೂಕಿನ ತಳವಾರದ ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿಯ ಪುತ್ರಿ.
ಬಣಕಲ್‌ನ ನಜರೆತ್ ಶಾಲೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್.ಬಿ.ಸಹನ (85.60), ಮೆಲಿಟ.ಜೆ.ಮೊಂತೆರೊ (85.40), ಎಚ್.ಆರ್.ಸುಧನ್ವ (84), ಬಿ.ಆರ್.ನಿಖಿಲ್ (83.80), ಡಿ.ಸುನಿಧಿ (83), ಜಿ.ಬಿ.ತನ್ಮಯ (82.80), ಎಚ್.ಎ.ಆಕರ್ಷ (ಶೆ.82.40), ಕೆ.ಎಸ್.ನೆಹಾ (80.40), ಬಿ.ಎಸ್.ವೇದಾಂತ್ (80.20), ಆಸ್ಟನ್.ಎಂ.ಡಿಸೋಜ (ಶೇ.79.80), ಸಿ.ಆರ್.ಆತ್ಮೀಯ (79.60), ಟಿ.ಗ್ಞಾನವಿ (78), ಜಿ.ಎಂ.ಮನುದೇವ್ (77.40), ಎ.ಎಂ.ಪ್ರೀತಿಪಟೇಲ್ (76.80), ಎಚ್.ಎ.ಸಮ್ಯೋಗ್ (76.80), ಡಿ.ಎಂ.ಶಿಕ್ಷಣ್‌ಪಟೇಲ್ (76.20) ರೋಶನಿಡಿಸೋಜ (75.80), ಎಚ್.ಪಿ.ಮಾನ್ಯ (75.60), ಎಚ್.ಆರ್.ಅಕ್ಷಿತ (ಶೇ.74.60), ಸಹನಮೊಂತೆರೊ (74.20), ಸಿದ್ದಾರ್ಥ್ ಪಿ.ಮಠ (72.80), ಎಲ್.ಪ್ರೀಯಾಂಕ (72.40), ಕೆ.ಎಂ.ಆಶ್ವರ್ಯ (71.60), ಎನ್.ಸಾನ್ವಿಗೌಡ (70), ತಪಸ್ಯ ತಿಲಕ್ (69.20), ಎಚ್.ಆರ್.ಶ್ರೀದೇವ್ (69), ಎಂ.ಎಲ್.ಸುಗ್ಞಾನ ಕೀರ್ತನ್ (65.60) ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಹಾಗೂ ಆಡಳಿತ ವರ್ಗದವರು ಅಭಿನಂದಿಸಿದ್ದಾರೆ.
ಶ್ರಮಪಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯ. ತನ್ನ ಹೆತ್ತವರ ಉತ್ತಮ ಮಾರ್ಗದರ್ಶನದಿಂದ ನಾನು ಶ್ರಮ ಪಟ್ಟು ಓದಿದ್ದೇನೆ. ಶಾಲೆಯ ಶಿಕ್ಷಕರ ಮತ್ತು ಆಡಳಿತ ವರ್ಗದ ಸಹಕಾರ ಮತ್ತು ಪ್ರೋತ್ಸಾಹವು ಇದ್ದುದರಿಂದ ಶೇ.100 ಫಲಿತಾಂಶ ಪಡೆಯುವ ಕನಸ್ಸಿತ್ತು. ಆದರೆ ಅದೃಷ್ಟ ಕೈಕೊಟ್ಟು ಶೆ. 92 ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸಂತಸವಿದೆ. ನಾನು ಮುಂದೆ ಡಾಕ್ಟರ್ ಆಗುವ ಕನಸು ಕಂಡಿದ್ದೇನೆ:-
ಎಂ.ಎಲ್.ಆಂಶು, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ.







