ಎಸ್ಸೆಸ್ಸೆಫ್ ತುಂಬೆ ಶಾಖೆ ವತಿಯಿಂದ ರಂಝಾನ್ ಕಿಟ್ ವಿತರಣೆ
ಬಂಟ್ವಾಳ, ಮೇ 30: ಎಸ್ಸೆಸ್ಸೆಫ್ ತುಂಬೆ ಶಾಖೆ ವತಿಯಿಂದ ತುಂಬೆ ಜಮಾಅತ್‌ನ 16 ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ಸುನ್ನೀ ಕಲ್ಚರಲ್ ಸೆಂಟರ್ ಕಚೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತುಂಬೆ ಶಾಖೆ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಎಸ್.ಬಿ., ಅಧ್ಯಕ್ಷ ಮುಸ್ತಾಕ್ ಮದನಿ, ಉಪಾಧ್ಯಕ್ಷ ಅಬ್ದುಲ್ ಲತೀಫ್ ಇಮಾಮಿ, ಹನೀಫ್ ಎಂ.ಎ. ಕಾರ್ಯದರ್ಶಿ ನೌಷಾದ್, ಜೊತೆ ಕಾರ್ಯದರ್ಶಿ ಅಮೀನ್, ಕೋಶಾಧಿಕಾರಿ ಆದಂ ಟಿ.ಎ., ಪ್ರಮುಖರಾದ ಇರ್ಫಾರ್, ತುಂಬೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀರ್ ಟಿ., ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.
Next Story





