ಮೇ 31: ಎಸ್‌ಡಿಪಿಐ ಧರಣಿ
ಮಂಗಳೂರು, ಮೇ 30: ಕೇಂದ್ರ ಸರಕಾರವು ದೇಶಾದ್ಯಂತ ಮಾಂಸದ ಉದ್ದೇಶಕ್ಕಾಗಿರುವ ಜಾನುವಾರು ಮಾರುಕಟ್ಟೆಯಲ್ಲಿ ದನ, ಎಮ್ಮೆ,ಕೋಣ, ಕರು, ಹೋರಿ ಹಾಗೂ ಒಂಟೆಗಳ ಮಾರಾಟವನ್ನು ನಿಷೇದಿಸಿ ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ ಮೇ 31ರಂದು ಸಂಜೆ 3:30ಕ್ಕೆ ದ.ಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿಯು ಧರಣಿ ನಡೆಸಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





