ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ
ಮಂಗಳೂರು, ಮೇ 30: ಸಂತ ಕ್ರಿಸ್ಟೋಫರ್ ಎಸೋಸಿಯೇಶನ್ ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಘದ ಗೌರವ ಅಧ್ಯಕ್ಷ ಸುಶೀಲ್ ನೊರೊನ್ಹಾ ಮಾತಾನಾಡಿದರು. ಸಂಘದ ಅಧ್ಯಕ್ಷ ಹೆರಾಲ್ಡ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಸದಸ್ಯರಾದ ಪೀಟರ್ ಗೊನ್ಸಾಲ್ವಿಸ್,ಸೆಬಾಸ್ಟಿನ್ ಡಿಕ್ರುಸ್,ಡೆನಿಸ್ ಲೊಬೊ, ಹೆರಾಲ್ಡ್ ಎಫ್. ಡಿಸೋಜ, ಗ್ರೆಗೊರಿ ವೇಗಸ್ ಪುಸ್ತಕಗಳನ್ನು ವಿತರಿಸಿದರು. ಉಪಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ವಂದಿಸಿದರು. ವಿನ್ಸೆಂಟ್ ಲಾವೆಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Next Story





