Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಜನವರಿಯಲ್ಲೇ ನದಿ ಹರಿವು ಸ್ಥಗಿತವೇ...

‘ಜನವರಿಯಲ್ಲೇ ನದಿ ಹರಿವು ಸ್ಥಗಿತವೇ ನೀರಿನ ಅಭಾವಕ್ಕೆ ಕಾರಣ’

ಕುಡಿಯುವ ನೀರಿನ ಸಮಸ್ಯೆ ಕುರಿತು ನಗರಸಭೆಯಲ್ಲಿ ತೀವ್ರ ಚರ್ಚೆ

ವಾರ್ತಾಭಾರತಿವಾರ್ತಾಭಾರತಿ30 May 2017 6:40 PM IST
share
‘ಜನವರಿಯಲ್ಲೇ ನದಿ ಹರಿವು ಸ್ಥಗಿತವೇ ನೀರಿನ ಅಭಾವಕ್ಕೆ ಕಾರಣ’

ಉಡುಪಿ, ಮೇ 30: ನಗರದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಟ್ಯಾಂಕರ್ ಕೊರತೆ, ಉಚಿತ ನೀರಿಗೆ ಹಣ ವಸೂಲಿ, ಸ್ವರ್ಣ ನದಿಯ ಹೂಳೆತ್ತುವ ಕುರಿತು ಮಂಗಳವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದವು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅದ್ಯಕ್ಷತೆಯನ್ನು ಇಂದು ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಡಾ.ಎಂ. ಆರ್.ಪೈ, 2012-13ರಲ್ಲಿ ಇದೇ ರೀತಿ ಮುಂಗಾರು ವಿಳಂಬವಾದಾಗ ನೀರಿನ ಅಭಾವ ತಲೆದೋರಿತ್ತು. ಆಗ ನಮ್ಮ ಆಡಳಿತ ಅದನ್ನು ಸಮರ್ಥವಾಗಿ ನಿರ್ವ ಹಿಸಿತ್ತು. ಈ ಬಾರಿ ಅದು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಸ್ವರ್ಣ ನದಿಯಿಂದ ಹೂಳು ತೆಗೆಯದೆ ಇರುವುದು ಮುಖ್ಯ ಕಾರಣ. ಹೀಗಾಗಿ ನಾವು ಇಂದು ಟ್ಯಾಂಕರ್ ನೀರಿಗೆ ಜೋತು ಬೀಳುವಂತಾಗಿದೆ ಎಂದು ಅವರು ದೂರಿದರು. 2013ರಲ್ಲಿ ನೀರಿನ ಸಮಸ್ಯೆ ಎದುರಾದಾಗ ನಾವು ಸಾಕಷ್ಟು ಕಷ್ಟ ಪಟ್ಟಿದ್ದೇವೆ ಎಂದು ಅಧ್ಯಕ್ಷರು ಹೇಳಿದರು.

ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಆಗ ಪ್ರಮೋದ್ ಮಧ್ವರಾಜ್ ತಮ್ಮ ಸ್ವಂತ ಖರ್ಚಿನಿಂದ ಎಲ್ಲ ವಾರ್ಡ್‌ಗಳಿಗೆ ಉಚಿತ ನೀರು ಸರಬರಾಜು ಮಾಡಿದ ಪರಿಣಾಮ ಈ ಸಮಸ್ಯೆ ಉಂಟಾಗಿಲ್ಲ. 30 ವರ್ಷಗಳ ಆಡಳಿತ ನಡೆಸಿದ ಬಿಜೆಪಿ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿದರು.

ಪರಿಸರ ಇಂಜಿನಿಯರ್ ರಾಘವೇಂದ್ರ ಮಾತನಾಡಿ, 2013ರಲ್ಲಿ 13,000 ನೀರಿನ ಸಂಪರ್ಕ ಇದ್ದರೆ ಈಗ 19,500 ಇದೆ. 4 ವರ್ಷಗಳಲ್ಲಿ 2100 ನೀರಿನ ಸಂಪರ್ಕ ಹೆಚ್ಚಾಗಿದೆ. ಆದರೆ ಈಗ 21-22ಗಂಟೆ ಮಾತ್ರ ಪಂಪಿಂಗ್ ಮಾಡಲಾಗುತ್ತದೆ. ಆಗ ಪ್ರತಿದಿನ 27ದಶಲಕ್ಷ ಲೀಟರ್ ಬಳಕೆ ಮಾಡುತ್ತಿದ್ದರೆ ಈಗ ಅದರ ಪ್ರಮಾಣ 37-38ದಶಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಸ್ವರ್ಣ ಎರಡನೆ ಹಂತದ 25ವರ್ಷಗಳ ಯೋಜನೆ ಪ್ರಕಾರ ಸ್ವರ್ಣ ನದಿಯಲ್ಲಿ ಒಳಹರಿವು ನಿಂತ ಬಳಿಕ 101 ದಿನಗಳ ನೀರು ಬಳಕೆ ಮಾಡಬಹುದಾಗಿದೆ. ಆದರೆ ಇಂದು 60-70 ದಿನಕ್ಕೆ ನೀರು ಖಾಲಿ ಆಗುತ್ತದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಒಳಹರಿವು ನಿಲ್ಲುತ್ತಿದ್ದರೆ, ಈ ಬಾರಿ ಮಳೆ ಕಡಿಮೆಯಾದ ಪರಿಣಾಮ ಜನವರಿ ತಿಂಗಳಲ್ಲಿ ಒಳಹರಿವು ನಿಂತಿದೆ. ಪ್ರಸ್ತುತ ಮೂರರಿಂದ ಐದು ದಿನ ಗಳಿಗೆ ಬೇಕಾದ ನೀರು ಇರುವುದರಿಂದ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಹೂಳೆತ್ತಲು ತಾತ್ಕಾಲಿಕ ತಡೆ: 

ಸ್ವರ್ಣ ನದಿಯಲ್ಲಿ ತುಂಬಿರುವ ಹೂಳು ತೆಗೆಯಲು ಕರೆದಿರುವ ಟೆಂಡರ್ ಯಾಕೆ ರದ್ದುಗೊಂಡಿತು ಎಂದು ಆಡಳಿತ ಪಕ್ಷದ ಸದಸ್ಯ ಪ್ರಶಾಂತ್ ಭಟ್ ಸಭೆಯಲ್ಲಿ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಿ.ಮಂಜುನಾಥಯ್ಯ, ಸ್ವರ್ಣ ನದಿಯ ಹೂಳೆತ್ತುವ ಬಗ್ಗೆ ಹೈಡ್ರೋಗ್ರಾಫಿಕ್ ಸರ್ವೆ ನಡೆಸಿ 200 ಪುಟಗಳ ವರದಿ ಸಿದ್ಧ ಪಡಿಸಲಾಗಿತ್ತು. ಅದರಂತೆ ಬಜೆಯಿಂದ ಶಿರೂರುವರೆಗೆ ಏಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ 7ಬ್ಲಾಕ್‌ಗಳಿಂದ ಹೂಳು ತೆಗೆಯುವ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಲಾಗಿತ್ತು.

ಈ ಕುರಿತು ಟೆಂಡರ್ ಕರೆದು ಭಂಡಾರಿಬೆಟ್ಟು ಎಂಬಲ್ಲಿ ಹೂಳು ತೆಗೆದು ಅಲ್ಲೇ ರಾಶಿ ಹಾಕಲಾಗಿದೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಅಕ್ರಮ ಮರಳುಗಾರಿಕೆಯ ಆರೋಪಗಳನ್ನು ಹೊರಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹೂಳು ತೆಗೆಯುವ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚನೆ ನೀಡಿದರು. ಅದರಂತೆ ಹೂಳೆತ್ತುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಮುಂದೆ ಯಾವ ರೀತಿ ಹೂಳು ತೆಗೆಯಬೇಕು ಎಂಬುದರ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸ ಬೇಕು. ಹೂಳೆತ್ತುವ ಕಾರ್ಯವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಮಾಡಲಾಗುವುದು. ಇದಕ್ಕೆ ಇಲಾಖೆಯಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಅವರು ಹೇಳಿದರು.

ಉಚಿತ ನೀರಿಗೆ ಹಣ ವಸೂಲಿ:

ಕೊಡಂಕೂರು ವಾರ್ಡ್‌ನಲ್ಲಿ ನಗರಸಭೆ ವತಿಯಿಂದ ಸರಬರಾಜು ಮಾಡುವ ಉಚಿತ ಟ್ಯಾಂಕರ್ ನೀರಿಗೆ ಪ್ರತಿ ಮನೆ ಯವರಿಂದ 20ರೂ.ನಂತೆ ಹಣ ವಸೂಲಿ ಮಾಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿರುವುದಾಗಿ ದಿನಕರ ಶೆಟ್ಟಿ ಹೆರ್ಗ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ಕೇವಲ ಎರಡು ಮನೆಯವರು ಮಾತ್ರ ಚಹಾ ಕುಡಿಯಲೆಂದು ಹಣ ನೀಡಿದ್ದರೆ ಹೊರತು ಎಲ್ಲ ಮನೆಯವ ರಿಂದ ತೆಗೆದುಕೊಂಡಿಲ್ಲ. ಕೆಲವರು ಇದನ್ನು ವಿವಾದ ಸೃಷ್ಠಿಸಲೆಂದೇ ಮಾಡಿದ್ದಾರೆ. ಸದ್ಯಕ್ಕೆ ಹಣ ಪಡೆದುಕೊಂಡವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದರು.

ಉಚಿತ ನೀರು ಎಂಬುದಾಗಿ ಬೋರ್ಡ್ ಹಾಕಿ ಜನರ ಬಳಿ ಹಣ ಪಡೆಯು ವುದರಿಂದ ಇಡೀ ನಗರಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೆರ್ಗ ದೂರಿ ದರು. ‘ನಾವು ಯಾರ ಬಳಿಯೂ ಹಣ ನೀಡಿ ಅಂತ ಹೇಳಿಲ್ಲ’ ಎಂದು ಆ ವಾರ್ಡಿನ ಸದಸ್ಯೆ ಜಾನಕಿ ಗಣಪತಿ ಶೆಟ್ಟಿಗಾರ್ ಸ್ಪಷ್ಟಪಡಿಸಿದರು. ಇವರೊಂದಿಗೆ ಆಡಳಿತ ಪಕ್ಷದ ಸದಸ್ಯರು ದ್ವನಿಗೂಡಿಸಿ ಈ ವಿಚಾರವನ್ನು ಸಮರ್ಥಿಸಿ ಕೊಂಡರು.‘ಕುಡಿಯುವ ನೀರು ಅಭಾವ ಇರುವ ಇಂತಹ ಸಮಯದಲ್ಲೂ ಕೆಲವು ವಾರ್ಡ್‌ಗಳಿಗೆ ಟ್ಯಾಂಕರ್‌ಗಳು ಬರುತ್ತಿಲ್ಲ. ಒಂದು ವಾರ್ಡ್‌ಗೆ ಕನಿಷ್ಠ ಮೂರು ಟ್ಯಾಂಕರ್ ಬರುವಂತೆ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಅಭಾವ ಈ ರೀತಿ ಇರು ವಾಗ ಅವ್ಯವಸ್ಥೆ ಸರಿಯಲ್ಲ ಎಂದು ನರಸಿಂಹ ನಾಯಕ್ ಟೀಕಿಸಿದರು.

ಕಸದ ತೆರಿಗೆಗೆ ಆಕ್ಷೇಪ:

ನಗರಸಭೆಯಿಂದ ಕಸದ ತೆರಿಗೆಯನ್ನು ವಸೂಲಿ ಮಾಡುತ್ತಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯ ವಿಜಯ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಇದು ತೆರಿಗೆಯಲ್ಲ, ಕಸ ಸಂಗ್ರಹದ ಶುಲ್ಕ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದರು. ರಾಜ್ಯ ಸರಕಾರ ನೀಡಿದ ಮಾರ್ಗದರ್ಶನದ ಪ್ರಕಾರ ಕಸ ವಿಲೇವಾರಿಗೆ ಸಂಗ್ರಹಿಸುವ ಸೆಸ್ ಇದಾಗಿದೆ ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ತಿಳಿಸಿದರು.

ನಮ್ಮ ಮನೆಗೆ ಕಸ ತೆಗೆದುಕೊಳ್ಳುವ ವಾಹನ ಬಾರದಿದ್ದರೂ ನಾವು ಯಾಕೆ ಹಣ ಪಾವತಿ ಮಾಡಬೇಕು. ಕಸ ವಿಲೇವಾರಿಯ ವಾಹನ ನಮ್ಮ ಮನೆಯ ಬಳಿ ಬರಲು ರಸ್ತೆ ಇಲ್ಲ. ಆದರೂ ಕಾರ್ಮಿಕರು ಮನೆಗೆ ಬಂದು ಕಸ ತೆಗೆದು ಕೊಂಡು ಹೋಗುತ್ತಿಲ್ಲ ಎಂದು ವಿಜಯ ಪೂಜಾರಿ ದೂರಿದರು. ಈ ಕುರಿತು ತೀವ್ರ ಚರ್ಚೆಗಳು ನಡೆದವು. ಆಡಳಿತ ವ್ಯವಸ್ಥೆಯ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕಸ ಸಂಗ್ರಹಣೆಗೆ ಸಂಬಂಧಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು.

ನಗರದ ವಿವಿಧೆಡೆ ವಿದ್ಯುತ್ ಕಂಬ, ಮರಗಳಿಗೆ ಹಾಕಿರುವ ಕೇಬಲ್‌ಗಳಿಂದ ಸಾರ್ವಜನಿಕರಿಗೆ ತೀರಾ ತೊಂದರೆಯಾಗಿದ್ದು, ಇದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿ ಸುವಂತೆ ರಮೇಶ್ ಕಾಂಚನ್ ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿ ಕಾರಿಗಳು ಕೇಬಲ್ ಆಪರೇಟರ್‌ಗಳನ್ನು ಕರೆಸಿ ಮಾತುಕತೆ ನಡೆಸುವ ಕುರಿತು ನಿರ್ಣಯ ಮಾಡುವಂತೆ ಅವರು ಒತ್ತಾಯಿಸಿದರು.

ನಗರಸಭೆಯ ಗುತ್ತಿಗೆ ಆಧಾರಿತ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದಕ್ಕೆ ಸದಸ್ಯ ಶಶಿರಾಜ್ ಕುಂದರ್ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.

ಆಡಳಿತ ಪಕ್ಷದ ಸದಸ್ಯನಿಂದಲೇ ಎಚ್ಚರಿಕೆ!

ದಾರಿದೀಪ ಸಮಸ್ಯೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿ, ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಕೂಡಲೇ ಅವರಿಗೆ ನೀಡುವ ಬಿಲ್ ಗಳನ್ನು ನಿಲ್ಲಿಸಬೇಕು. ಇದು ನಗರಸಭೆಯ ಹಣವನ್ನು ಲೂಟಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ಪ್ರಭಾವಿಗಳು ಇದ್ದಾರೆ’ ಎಂದು ದಿನಕರ ಶೆಟ್ಟಿ ಹೆರ್ಗ ಆರೋಪಿಸಿದರು.

ಈ ಕುರಿತು ಉತ್ತರಿಸಿದ ಅಧಿಕಾರಿಗಳು, ಸದ್ಯಕ್ಕೆ ದಾರಿದೀಪಕ್ಕೆ ಸಂಬಂಧಿಸಿದ 130 ದೂರುಗಳು ಬಾಕಿ ಇವೆ. ಆನ್‌ಲೈನ್ ಮೂಲಕ ಬಂದ ದೂರುಗಳಿಗೆ ಸ್ಪಂದಿಸಿ ದಾರಿದೀಪಗಳನ್ನು ದುರಸ್ತಿ ಮಾಡಲಾಗಿದೆ ಎಂದರು.

ದಾರಿದೀಪದ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಆಡಳಿತ ಪಕ್ಷದ ಸದಸ್ಯರಾಗಿರುವ ಪ್ರಶಾಂತ್ ಅಮೀನ್ ಎಚ್ಚರಿಕೆ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X