ಮಂಗಳೂರು, ಮೇ 30: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎಡಪದವು ಗ್ರಾಮದ ಹೊಸಮನೆ ಎಂಬಲ್ಲಿನ ಫಾರ್ಮ್‌ಹೌಸ್‌ನಲ್ಲಿ ಶೇಖರಿಸಿಡಲಾಗಿದ್ದ 10 ಗೋಣಿ ಅಡಕೆಯನ್ನು ಕಳವುಗೈದ ಘಟನೆ ನಡೆದಿದೆ. ಸುಮಾರು 20 ಸಾವಿರ ರೂ. ಮೌಲ್ಯದ ಅಡಕೆ ಕಳವಾಗಿದೆ ಎಂದು ನವೀನ್ ಕುಮಾರ್ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.