ಮಲಾರ್ ಯಾದ್ ಫೌಂಡೇಶನ್‌ನಿಂದ ಪುಸ್ತಕ ವಿತರಣೆ

ಮಂಗಳೂರು, ಮೇ 30: ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದು ಪಜೀರು ಗ್ರಾಪಂ ಮಾಜಿ ಅಧ್ಯಕ್ಷ ಭರತ್‌ರಾಜ್ ಶೆಟ್ಟಿ ಪಜೀರುಗುತ್ತು ಹೇಳಿದರು.
ಮಲಾರ್ ಯಾದ್ ಫೌಂಡೇಶನ್ ವತಿಯಿಂದ ಪಾವೂರು ಗ್ರಾಪಂ ಸಮುದಾಯ ಭವನದಲ್ಲಿ ಅರ್ಹ 300 ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಸಿ.ಎಫ್ ಮುಖ್ಯ ವ್ಯವಸ್ಥಾಪಕ ಪಿ.ಸುರೇಶ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಕುಮಾರ್ ಕೆ.ಎಸ್. ಮಾತನಾಡಿದರು.
ಉಚಿತವಾಗಿ ದೊರಕುವ ಯಾವುದೇ ವಸ್ತು ವ್ಯರ್ಥವಾಗುವುದು ಖಚಿತ, ಉಚಿತವಾಗಿ ಪುಸ್ತಕ ಪಡೆದವರು ಯಾವುದೇ ರೀತಿಯಲ್ಲಿ ಸಂಘಟಕರ ಪ್ರಯತ್ನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಪಾವೂರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಫಿರೋಝ್, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ವಿವೇಕ್ ರೈ, ಎಂ.ಪಿ. ಹಸನ್, ಚಕ್ಕರ್ ಮುಹಮ್ಮದ್ ಇನೋಳಿ, ಐ.ಬಿ.ಸಾದಿಕ್, ಚೆನ್ನಮ್ಮ, ಜಯಂತಿ, ತಾಪಂ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಅಬ್ದುಲ್ ಜಬ್ಬಾರ್ ಬೋಳಿಯಾರ್, ಬಶೀರ್ ಅಹ್ಮದ್, ಎಂಸಿಎಫ್ ವ್ಯವಸ್ಥಾಪಕ ಜಯರಾಂ ಕಾರಂತ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಪಶುಭಾಗ್ಯ ಸಮಿತಿ ನಿರ್ದೇಶಕ ಉಗ್ಗಪ್ಪಪೂಜಾರಿ, ಆರಾಧನ ಸಮಿತಿ ನಿರ್ದೇಶಕ ಗೋಪಾಲ ತಚ್ಛಾಣಿ, ಬದ್ರಿಯಾ ನಗರ ಶಾಲೆಯ ಮುಖ್ಯ ಶಿಕ್ಷಕಿ ಭವಾನಿ, ಶಿಕ್ಷಕ ಮಜೀದ್ ಮಲಾರ್, ಇನೋಳಿ ಶಾಲೆಯ ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಯಾದ್ ಫೌಂಡೇಶನ್ ಸದಸ್ಯರಾದ ಇರ್ಫಾನ್, ಅಲ್ತಾಫ್, ಹನೀಫ್ ಕುಂಜತ್ತೂರು, ನಿಝಾಮ್, ಹನೀಫ್ ಮಲಾರ್ ಉಪಸ್ಥಿತರಿದ್ದರು.
ಸದಸ್ಯ ಮಹಮ್ಮದ್ ನಿಸಾರ್ ಕಾರ್ಯಕ್ರಮ ನಿರೂಪಿಸಿದರು.







