ಆಳ್ವಾಸ್: ಮೂವರು ಸಿಇಟಿ ಸಾಧಕರು

ಮೂಡುಬಿದಿರೆ, ಮೇ 30: ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನುಸೂಯ, ಭರತ್ ಕುಮಾರ್, ಸೌಮ್ಯ ರ್ಯಾಂಕ್ ಪಡೆದಿದ್ದು, ಈ ಮೂವರು ಸಾಧಕ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಸುವಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಅನುಸೂಯ:

ಗುಲ್ಬರ್ಗಾದ ಕೃಷಿಕ ಶಿವಶಂಕರ್ ರೆಡ್ಡಿ- ಗೃಹಿಣಿ ರೇಣುಕಾ ಅವರ ಪುತ್ರಿ, ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ಯೋಜನೆಯಡಿ ಪಿಯುಸಿ ವ್ಯಾಸಂಗ ಮಾಡಿರುವ ಅನುಸೂಯ ಆಯುಷ್ವಿಷಯಲ್ಲಿ 5ನೇ ರ್ಯಾಂಕ್, ಕೃಷಿ ವಿಷಯದಲ್ಲಿ 8ನೇ ಹಾಗೂ ಪಶುವಿಜ್ಞಾನದಲ್ಲಿ 13ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಭರತ್ ಕುಮಾರ್:

ಕೋಲಾರ ಒಬೇನಾಹಳ್ಳಿಯ ಕೃಷಿಕ ತಿಪ್ಪ ರೆಡ್ಡಿ-ಗೃಹಿಣಿ ರಾಧಮ್ಮ ಅವರ ಪುತ್ರ, ಆಳ್ವಾಸ್ ದತ್ತು ಸ್ವೀಕಾರ ಯೋಜನೆಯಡಿ ಪಿಯುಸಿ ವ್ಯಾಸಂಗ ಪೂರೈಸಿರುವ ಭರತ್ ಕುಮಾರ್ ಕೃಷಿ ವಿಷಯದಲ್ಲಿ 4ನೇ ರ್ಯಾಂಕ್, ಪಶು ವಿಜ್ಞಾನ 3ನೇ ರ್ಯಾಂಕ್ ಪಡೆದಿದ್ದಾರೆ.
ಸೌಮ್ಯ:

ಬಿಎಸ್‌ಸಿ ಕೃಷಿಯಲ್ಲಿ 5 ರ್ಯಾಂಕ್ ಹೋಮಿಯೋಪಥಿಯಲ್ಲಿ 17 ಹಾಗೂ ಇಂಜಿನಿಯರಿಂಗ್‌ನಲ್ಲಿ 34 ರ್ಯಾಂಕ್ ಗಳಿಸಿರುವ ಆಳ್ವಾಸ್‌ನ ಸೌಮ್ಯ ಮೂಲತಃ ಹುಬ್ಬಳ್ಳಿಯ ಅಜಪತ್ ನಗರದವರು.
ಹಾವೇರಿಯ ಶಿಗಾವ್ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಶಿಧರ್ ಕಟ್ಟಿಮಣಿ- ಅನುಸೂಯ ದಂಪತಿಯ ಪುತ್ರಿಯಾಗಿರುವ ಈಕೆ ಆಳ್ವಾಸ್ ಉಚಿತ ಶಿಕ್ಷಣ ಯೋಜನೆಯಡಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.







