ಗೋಮಾರಾಟ ನಿಷೇಧ: ಕೇಂದ್ರಕ್ಕೆ ಸಡ್ಡುಹೊಡೆದ ತ್ರಿಪುರ ಸರಕಾರ

ಅಗರ್ತಲ, ಮೇ 31: ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರುವಂತಿಲ್ಲ ಎನ್ನುವ ಕೇಂದ್ರ ಸರಕಾರದ ಆದೇಶವನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ತ್ರಿಪುರ ಸರಕಾರ ಹೇಳಿದೆ.
ಗೋ ಮಾರಾಟಕ್ಕೆ ಸಂಬಂಧಿಸಿ ಕೇಂದ್ರ ಸರಕಾದ ನೂತನ ನೀತಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಹೊರಡಿಸುವ ಎಲ್ಲಾ ಆದೇಶಗಳನ್ನು ಪಾಲಿಸಬೇಕು ಎನ್ನುವುದು ಕಡ್ಡಾಯವಲ್ಲ” ಎಂದಿದ್ದರು.
ಈ ಹಿಂದೆ ಕೇಂದ್ರದ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗೋವು ಮಾರಾಟಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನ ವಿರೋಧಿಸಬೇಕು ಎಂದಿದ್ದರು.
ಇದೀಗ ಕೇರಳ ಹಾಗೂ ಕರ್ನಾಟಕ ಸರಕಾರದಂತೆ ತ್ರಿಪುರ ಸರಕಾರ ಕೂಡ ಕೇಂದ್ರ ಸರಕಾರದ ಆದೇಶ ಪಾಲಿಸಲು ಸಾಧ್ಯವಿಲ್ಲ ಎಂದಿದೆ.
Next Story





