ಪಾರ್ವತಮ್ಮ ರನ್ನು ಸಿಂಗಾಪುರಕ್ಕೆ ಕಳುಹಿಸಬಹುದಿತ್ತಲ್ಲಾ : ಲೀಲಾವತಿ

ಬೆಂಗಳೂರು, ಮೇ 31:"ಪಾರ್ವತಮ್ಮ ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಇನ್ನೂ ಇರಬೇಕಿತ್ತು….ಅವರಿಗೆ ಚಿಕಿತ್ಸೆ ಕೊಡಿಸಲು ಸಿಂಗಾಪುರಕ್ಕೆ ಕಳುಹಿಸಬಹುದಿತ್ತಲ್ಲಾ? ಅವರನ್ನು ಅವರ ಮಕ್ಕಳು ಯಾಕೆ ವಿದೇಶಕ್ಕೆ ಕರೆದೊಯ್ಯಲಿಲ್ಲ? ಎಂದು ಹಿರಿಯ ನಟಿ ಲೀಲಾವತಿ ಅವರು ಪ್ರಶ್ನಿಸಿದ್ದಾರೆ
ಸದಾಶಿವನಗರದಲ್ಲಿ ಪಾರ್ವತಮ್ಮ ಅವರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾರ್ವತಮ್ಮ ಅವರ ಹೆಚ್ಚಿನ ಚಿಕಿತ್ಸೆಗೆ ಸರಕಾರ ಗಮನಹರಿಸಬೇಕಿತ್ತು . ಆದರೆ ಯಾಕೆ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಲಿಲ್ಲ. ಸರಕಾರದ ಕೈಯಲ್ಲಿ ಹಣದ ಕೊರತೆ ಇದೆಯೋ ?ಎಂದು ಪ್ರಶ್ನಿಸಿದರು.
"ಪಾರ್ವತಮ್ಮ ಒಂದು ದೊಡ್ಡ ಹಿಮಾಲಯ ಪರ್ವತ. ಅವರು 30 ವರ್ಷದ ಹಿಂದೆ ನನಗೆ ತೆಂಗಿನಕಾಯಿ, ಹೂ ಕೊಟ್ಟಿದ್ದರು. ದೇವರು ಪಾರ್ವತಮ್ಮ ಆತ್ಮಕ್ಕೆ ಶಾಂತಿ ನೀಡಲಿ. ಪಾರ್ವತಮ್ಮ ರಾಜ್ಕುಮಾರ್ಗೆ ಮೋಕ್ಷ ಸಿಗಲಿ "ಎಂದರು.
Next Story





