ಕಣ್ಣೂರಿನಲ್ಲಿ ಗೋವನ್ನು ಕೊಂದವರಿಗೆ ನೇಣು ಹಾಕಬೇಕು: ಶಿವಸೇನೆ

ಹೊಸದಿಲ್ಲಿ, ಮೇ 31: ಕಣ್ಣೂರಿನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಗೋವನ್ನು ಕಡಿದು ಕೇಂದ್ರಸರಕಾರದ ಜಾನುವಾರು ಹತ್ಯೆ ಅಧಿಸೂಚನೆಯನ್ನು ವಿರೋಧಿಸಿದ ಘಟನೆಯನ್ನು ಮುಂದಿಟ್ಟು ದಿಲ್ಲಿಯ ಕೇರಳ ಹೌಸ್ ಎದುರುಗಡೆ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ದಿಲ್ಲಿ ಶಿವಸೇನೆ ಅಧ್ಯಕ್ಷ ನೀರಜ್ ಸೇಠಿ ಕಣ್ಣೂರಿನಲ್ಲಿ ಗೋಹತ್ಯೆ ಮಾಡಿದವರನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳವಾರ ಸಂಜೆ ಕೇರಳ ಹೌಸಿನ ಎದುರಿನಲ್ಲಿ ಒಗ್ಗೂಡಿದ ಶಿವಸೇನೆ ಕಾರ್ಯಕರ್ತರು ಸ್ವಲ್ಪಸಮಯ ಘೋಷಣೆ ಕೂಗಿ ಹೊರಟು ಹೋದರು.
ಕಣ್ಣೂರಿನಲ್ಲಿ ಕರುವನ್ನು ಬಹಿರಂಗವಾಗಿ ಕಡಿದ ಘಟನೆಯಲ್ಲಿ ಯುವಮೋರ್ಚಾ ದಿಲ್ಲಿ ಘಟಕ ಕಾಂಗ್ರೆಸ್ ಕೇಂದ್ರ ಕಚೇರಿಗೆ ನಡೆಸಿದ ಜಾಥಾ ಘರ್ಷಣೆಯಲ್ಲಿ ಕೊನೆಗೊಂಡಿದೆ. ಯುವಮೋರ್ಚಾ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ದೂಡಲು ಶ್ರಮಿಸಿದಾಗ ಪೊಲೀಸರು ಮತ್ತು ಅವರ ನಡುವೆ ಘರ್ಷಣೆ ಉಂಟಾಗಿದೆ. ನಂತರ ಪೊಲೀಸರು ಜಲಫಿರಂಗಿ ಸಿಡಿಸಿ ಪ್ರತಿಭಟನಾಕಾರರನ್ನು ಪೊಲೀಸರು ತೆರವು ಗೊಳಿಸಿದ್ದಾರೆ. ಯುವ ಮೋರ್ಚಾ ಕಾರ್ಯಕರ್ತರು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯ ಪ್ರತಿಕೃತಿಗಳನ್ನು ದಹಿಸಿದರು.







