ಪವಾರ್ ಎನ್‌ಡಿಎ ಸೇರಿದರೆ ರಾಷ್ಟ್ರಪತಿಯಾಗಬಹುದು: ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ

ಥಾಣೆ,ಮೇ 31:ಎನ್‌ಸಿಪಿನಾಯಕ ಮಾಜಿ ಕೇಂದ್ರಸಚಿವ ಶರದ್ ಪವಾರ್ ಎನ್‌ಡಿಎ ಸೇರಿದರೆ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಹೇಳಿದ್ದಾರೆ. ಶರದ್‌ಪವಾರ್‌ರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿಸಲು ಚಿಂತನೆ ನಡೆಸುತ್ತಿವೆ ಎನ್ನುವ ವರದಿಯಾಗಿರುವ ನಿಟ್ಟಿನಲ್ಲಿ ಎನ್‌ಡಿಎಯ ಘಟಕ ಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ ನಾಯಕ ಅಠಾವಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಹಾಗೂ ಪವಾರ್ ನಡುವೆ ಉತ್ತಮ ಸಂಬಂಧವಿದೆ. ಮೋದಿ, ಅಮಿತ್‌ಶಾರೊಂದಿಗೆ ಈವಿಷಯವನ್ನು ಚರ್ಚಿಸುತ್ತೇನೆ ಎಂದು ಅಠಾವಳೆ ಹೇಳಿದ್ದಾರೆ. ಪತ್ರಕರ್ತರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಮಹಾರಾಷ್ಟ್ರದ ಸಚಿವರೊಬ್ಬರ ಹೇಳಿಕೆಯನ್ನು ರಾಮ್‌ದಾಸ್‌ರ ಗಮನಕ್ಕೆ ತಂದಾಗ,ಅವರು ಪತ್ರಕರ್ತರು ತನ್ನ ಮಿತ್ರರು, ಹಾಗೂ ಪ್ರಶ್ನೆ ಕೇಳುವ ಹಕ್ಕು ಅವರಿಗಿದೆ ಎಂದು ಹೇಳಿದರು.
Next Story





