ಸ್ಮಶಾನದಲ್ಲಿ ಅಂದರ್ ಬಾಹರ್: 12 ಮಂದಿ ಸೆರೆ
ಮೂಡಿಗೆರೆ, ಮೇ.31: ಬಣಕಲ್ ಸಮೀಪದ ಮತ್ತಿಕಟ್ಟೆಯ ಸ್ಮಶಾನದ ಜಾಗದಲ್ಲಿ ಮಂಗಳವಾರ ಸಂಜೆ ಅಂದರ್ ಬಾಹರ್ ಹೆಸರಿನ ಜೂಜಾಟದಲ್ಲಿ ತೊಡಗಿದ್ದ ಸುಮಾರು 12 ಮಂದಿ ಆರೋಪಿಗಳ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಿಕಟ್ಟೆಯ ಸ್ಮಶಾನದಲ್ಲಿ ಅಂದರ್ ಬಾಹರ್ ಜೂಜಾಟ ನಡೆಸುತ್ತಿದ್ದ ಸಬ್ಲಿ ಮಂಜಯ್ಯ (66), ಬಿಳುಗುಳದ ಎನ್. ಶಂಕರೇಗೌಡ (33), ಛತ್ರಮೈದಾನದ ಜಿ.ಲೋಕೇಶ್ (34), ಕೆ.ಎಸ್. ರಾಜೇಶ್(41), ಟಿ.ನವೀನ್(30), ಎಸ್. ದಿಲೀಪ್(28), ಸುಖೇಶ್ ಸುಭಾಷನಗರ (45), ಕೆ.ಶಶಿಕುಮಾರ್ ಜಾವಳಿ (32), ಕೆ.ಆರ್. ಅಕ್ಷಯ್ ಸಾರ್‌ಗೋಡು(26), ಎಚ್. ಗುರುನಂದನ್ ಆಲ್ದೂರು(25), ದಿನೇಶ್ ಕೆಳಹಾಂದಿ (31), ಮಧುಶೆಟ್ಟಿ ಹಾಂದಿ (30) ಬಂಧಿತರು ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಒಟ್ಟು 13,150 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





