ಮುಠ್ಠಳ್ಳಿ ಶಾಲೆಯ ಕಂಪೌಂಡ್ ನಿರ್ಮಾಣಕ್ಕೆ ಶಾಸಕರಿಗೆ ಮನವಿ
ಭಟ್ಕಳ, ಮೇ 31: ತಾಲೂಕಿನ ಮುಠ್ಠಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವಶ್ಯಕ ಕಾಮಗಾರಿ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕ ಮಂಕಾಳ ವೈದ್ಯರಿಗೆ ಮುಠ್ಠಳ್ಳಿ ಗ್ರಾಮದ ನಾಗರಿಕರು ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ತಾಲೂಕಿನ ಮುಠ್ಠಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವಶ್ಯಕವಾಗಿ ಕಾಮಗಾರಿ ನಿರ್ಮಾಣ ಮಾಡಬೇಕಾದ ಕುರಿತು ಶಾಸಕ ಮಂಕಾಳ ವೈದ್ಯರಿಗೆ ಮುಠ್ಠಳ್ಳಿ ಗ್ರಾಮದ ನಾಗರಿಕರು ಹಾಗೂ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಸದಸ್ಯರು ಮನವಿಯನ್ನು ನೀಡಿದರು.
ಶಾಲಾ ಕಾಂಪೌಂಡ್, ಟೈಲ್ಸ್ ನೆಲಹಾಸು ನಿರ್ಮಾಣದ ಬಗ್ಗೆ ಶಾಸಕರಲ್ಲಿ ಮನವಿಯಿಟ್ಟಿದ್ದು, ಕಾಮಗಾರಿಯನ್ನು ಮಾಡಿಕೊಡುವು ದಾಗಿ ಭರವಸೆಯನ್ನು ನೀಡಿದ್ದಾರೆ. ಹಾಗೂ ಶಾಲೆಗೆ 4 ಕಂಪ್ಯೂಟರ್‍ನ ಅವಶ್ಯಕತೆಯು ಸಹ ಇದ್ದು, ಕಂಪ್ಯೂಟರ್ ನೀಡಬೇಕಾಗಿ ಶಾಸಕರಲ್ಲಿ ಊರಿನ ನಾಗರಿಕರು ಬೇಡಿಕೆಯನ್ನಿಟ್ಟಿದ್ದು, ಈ ಬಗ್ಗೆ 4 ಕಂಪ್ಯೂಟರ್ ನೀಡುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಮುಠ್ಠಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ ನಾಯ್ಕ, ಮುಠ್ಠಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜಟ್ಟಪ್ಪ ನಾಯ್ಕ ಸೇರಿದಂತೆ ಊರಿನ ನಾಗರಿಕರು ಉಪಸ್ಥಿತರಿದ್ದರು.





