ಸ್ಪೇನ್‌ನಲ್ಲಿ ಮೋದಿ: 7 ಒಪ್ಪಂದಗಳಿಗೆ ಸಹಿ
.jpg)
ಮ್ಯಾಡ್ರಿಡ್ (ಸ್ಪೇನ್), ಮೇ 31: ಪ್ರಧಾನಿ ನರೇಂದ್ರ ಮೋದಿಯ ಸ್ಪೇನ್ ಪ್ರವಾಸದ ವೇಳೆ ಉಭಯ ದೇಶಗಳು, ಸೈಬರ್ ಭದ್ರತೆ ಮತ್ತು ನಾಗರಿಕ ವಿಮಾನಯಾನದಲ್ಲಿ ತಾಂತ್ರಿಕ ಸಹಕಾರ ಸೇರಿದಂತೆ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.
ಸ್ಪೇನ್ ರಾಜಧಾನಿಯಲ್ಲಿರುವ ಮೊಂಕ್ಲೊ ಅರಮನೆಯಲ್ಲಿ ಆತಿಥೆಯ ದೇಶದ ಅಧ್ಯಕ್ಷ ಮರಿಯಾನೊ ರಜೊಯ್ ಜೊತೆಗೆ ವಿವಿಧ ವಿಷಯಗಳ ಬಗ್ಗೆ ಮೋದಿ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂಗಳಿಗೆ ಸಹಿ ಹಾಕಲಾಯಿತು.
ಶಿಕ್ಷೆಗೊಳಗಾದ ವ್ಯಕ್ತಿಗಳ ಹಸ್ತಾಂತರ ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹೊಂದಿದವರಿಗೆ ವೀಸಾ ಮನ್ನಾ ಕುರಿತ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಅಂಗಾಂಗ ಕಸಿ, ಸೈಬರ್ ಭದ್ರತೆ, ನವೀಕರಿಸಬಹುದಾದ ಇಂಧನ, ನಾಗರಿಕ ವಾಯುಯಾನದಲ್ಲಿ ಸಹಕಾರ ಮುಂತಾದ ಕ್ಷೇತ್ರಗಳಲ್ಲಿನ ಐದು ತಿಳುವಳಿಕೆ ಪತ್ರಗಳಿಗೂ ಸಹಿ ಹಾಕಲಾಯಿತು.
1988ರ ಬಳಿಕ ಸ್ಪೇನ್‌ಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ.
ಸ್ಪೇನ್ ಭಾರತದ ವ್ಯಾಪಾರ ಪಾಲುದಾರ ದೇಶವಾಗಿದ್ದು, ಐರೋಪ್ಯ ಒಕ್ಕೂಟದ ಏಳನೆ ಅತಿ ದೊಡ್ಡ ಪಾಲುದಾರ ದೇಶವಾಗಿದೆ.
Next Story





