ಯುಎಇ: ಮನೆಗೆಲಸದವರ ಕಾನೂನಿಗೆ ಅನುಮೋದನೆ

ಅಬುಧಾಬಿ, ಮೇ 31: ಯುಎಇಯ ಫೆಡರಲ್ ನ್ಯಾಶನಲ್ ಕೌನ್ಸಿಲ್ (ಎಫ್‌ಎನ್‌ಸಿ) ಮನೆಗೆಲಸಗಾರರ ಕುರಿತ ಕರಡು ಕಾನೂನಿಗೆ ಅನುಮೋದನೆ ನೀಡಿದೆ.
ಕೌನ್ಸಿಲ್‌ನ ಅಧ್ಯಕ್ಷ ಡಾ. ಅಮಲ್ ಅಬ್ದುಲ್ಲಾ ಅಲ್ ಕುಬೈಸಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 16ನೆ ಪರಿಶತ್ ಅಧಿವೇಶನದಲ್ಲಿ ಅನುಮೋದನೆ ಲಭಿಸಿದೆ.
ತನ್ನ ನಿವಾಸಿಗಳಿಗೆ ಅತ್ಯುತ್ತಮ ವಾಸಯೋಗ್ಯ ಪರಿಸ್ಥಿತಿಯನ್ನು ಒದಗಿಸುವ ಯುಎಇಯ ನಿರಂತರ ಪ್ರಯತ್ನಗಳ ಭಾಗವಾಗಿ ನೂತನ ಕರಡು ಕಾನೂನು ಜಾರಿಗೆ ಬಂದಿದೆ.
Next Story





