ಎಸ್.ಎ.ಕೃಷ್ಣಯ್ಯರಿಗೆ ‘ಕಡತ್ತಿಲಶ್ರೀ’ ಪ್ರಶಸ್ತಿ ಪ್ರದಾನ

ಉಡುಪಿ, ಮೇ 31: ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪ್ರಾಚೀನ ಗ್ರಂಥಗಳ ಸಂರಕ್ಷಣೆ, ಸಂಶೋಧನೆ ಅಗತ್ಯ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ ಹಾಗೂ ಕಾರ್ಕಳ ಹಂಡೆದಾಸ ಪ್ರತಿಷ್ಠಾನದ ಸಹಯೋಗದಲ್ಲಿ ರಾಜಾಂಗಣದಲ್ಲಿ ಬುಧವಾರ ನಡೆದ ಹಂಡೆ ಶ್ರೀಪಾದದಾಸರು ಮತ್ತು ಹಂಡೆ ಗುರುವೇದವ್ಯಾಸದಾಸರು ವಿರಚಿತ ಯಕ್ಷಗಾನ, ಸಂಕೀರ್ತನಾ ಭರತನಾಟ್ಯ ಮತ್ತು ಪೌರಾಣಿಕ ನಾಟಕ ಕಾರ್ಯಕ್ರಮದ ಸಮಾರೋಪ ಸಮಾರಂದಲ್ಲಿ ಅವರು ಮಾತನಾಡುತಿದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಎಸ್.ಎ.ಕೃಷ್ಣಯ್ಯ ಅವರಿಗೆ ‘ಕಡತ್ತಿಲಶ್ರೀ’(ತಾಡೋಲೆ ಹಾಗೂ ಕಡತಗಳ ಸಂರಕ್ಷಕರು) ಪ್ರಶಸ್ತಿ ಪ್ರದಾನ ಮಾಡಲಾಯಿತು. ಎನ್.ರಾಜಗೋಪಾಲ ಬಲ್ಲಾಳ್, ರಾಮಕೃಷ್ಣ ಕೊಡಂಚ, ಕೆ.ಪ್ರಕಾಶ್ ರಾವ್ ಅವರನ್ನು ಸನ್ಮಾನಿಸ ಲಾಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಹಂಡೆದಾಸ ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ ಮೊದಲಾದವರು ಉಪಸ್ಥಿತರಿದ್ದರು.





