ಚೆನ್ನೈ:ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಟೆಕ್ಕಿಯ ನಗ್ನ ಶವ ಪತ್ತೆ

ಚೆನ್ನೈ,ಮೇ 31: ಇನ್ಫೋಸಿಸ್‌ನ ಟೆಕ್ಕಿ ಇಳಯರಾಜ ಅರುಣಾಚಲಂ(32) ಅವರ ನಗ್ನ ಶವ ಕಳೆದ ರಾತ್ರಿ ನಗರದ ಹೊರವಲಯದಲ್ಲಿರುವ ಇನ್ಫಿ ಕಚೇರಿಯಲ್ಲಿನ ಅವರ ಡಾರ್ಮಿಟರಿಯಲ್ಲಿ ಪತ್ತೆಯಾಗಿದೆ.
ಚೆನ್ನೈನಿಂದ ಸುಮಾರು 120 ಕಿ.ಮೀ.ದೂರದಲ್ಲಿರುವ ತಿನಿದಿವನಂ ನಿವಾಸಿಯಾದ ಅರುಣಾಚಲಂ ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದು, ಅವರ ಪತ್ನಿ ಮಂಗಳವಾರ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು.
ಶವಪರೀಕ್ಷೆ ವರದಿ ಕೈಸೇರಿದ ಬಳಿಕವೇ ಸಾವಿಗೆ ಸ್ಪಷ್ಟ ಕಾರಣ ತಿಳಿದುಬರಲಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.
Next Story





