ಸ್ಪಂದನ ಕೇಂದ್ರ ಕಾರ್ಯಾರಂಭ
ಉಡುಪಿ ಮೇ 31: ರಾಜ್ಯ ಸರಕಾರದ ಆದೇಶದಂತೆ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಜನಸೇವಾ ಸ್ಪಂದನ ಕೇಂದ್ರವನ್ನು ಕಳೆದ ಡಿ.30ರಂದು ಅನಾವರಣಗೊಳಿಸಿದ್ದು, ಸ್ಪಂದನ ಕೇಂದ್ರದಲ್ಲಿ ನಾಡ ಕಚೇರಿಗಳ ಅಟಲ್ ಜೀ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಕಂದಾಯ ಇಲಾಖೆಯ 39 ಸೇವೆಗಳು, ಭೂಮಿ ಯೋಜನೆ ಯಡಿ ನೀಡಲಾಗುವ ಪಹಣಿ ಪತ್ರಿಕೆ, ಎಮ್‌ಆರ್ ಪ್ರತಿಗಳು, ಮೋಜಣಿ ಇಲಾಖೆಯ 11-ಇ ನಕಾಶೆ ಮತ್ತು ದೃಢೀಕೃತ ದಾಖಲೆಗಳು ಹಾಗೂ ಆಧಾರ್ ನೊಂದಣಿ ಸೇವೆಗಳನ್ನು ನೀಡಲಾಗುತ್ತದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





