ಭೀಕರ ರಸ್ತೆ ಅಪಘಾತ: 6 ಪ್ರವಾಸಿಗರು ಸ್ಥಳದಲ್ಲೇ ಮೃತ್ಯು

ಸಿಕ್ಕಿಂ, ಮೇ 31: ಪ್ರವಾಸಿಗರಿದ್ದ ವಾಹನವೊಂದು ಅಪಘಾತಕ್ಕೀಡಾಗಿ 6 ಮಂದಿ ಮೃತಪಟ್ಟ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಬಂಗಾಳ ಹಾಗೂ ದೇಶದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸಿಕ್ಕಿಂಗೆ ಭೇಟಿ ನೀಡುತ್ತಾರೆ. ಬಂಗಾಳ ಹಾಗೂ ಒಡಿಶಾದ ಎರಡು ಕುಟುಂಬಗಳ ಸದಸ್ಯರು ಉತ್ತರ ಸಿಕ್ಕಿಂನ ಲಾಚುಂಗ್ ನಿಂದ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
“8 ಮಂದಿ ಪ್ರವಾಸಿಗರಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಹಾಗೂ ಇತರ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಬಿಜಯ್ ಸುಬ್ಬಾ ಹೇಳಿದ್ದಾರೆ.
“ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ, ಮೃತಪಟ್ಟವರನ್ನು ಮೈಕೆಲ್ ಬಾಗ್, ಶೆಫಾಲಿ ಬಾಗ್, ಸೋವೆನ್ ರಾಜ್ ಬಾಗ್ , ಸುಜಾತಾ, ತ್ರಿಪಾಣಾ ಹಾಗೂ ಜಸ್ಮಿತಾ ದಂಡಪತ್ ಎಂದು ಗುರುತಿಸಲಾಗಿದೆ.
Next Story





