Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪರಿಸರ, ಅಭಿವೃದ್ಧಿಯ ಕುರಿತಂತೆ ಇಸ್ಲಾಮ್

ಪರಿಸರ, ಅಭಿವೃದ್ಧಿಯ ಕುರಿತಂತೆ ಇಸ್ಲಾಮ್

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ1 Jun 2017 12:06 AM IST
share
ಪರಿಸರ, ಅಭಿವೃದ್ಧಿಯ ಕುರಿತಂತೆ ಇಸ್ಲಾಮ್

ಯಾವುದೇ ಧರ್ಮ ಒಣ ವೇದಾಂತ ಮತ್ತು ಅರ್ಥವಾಗದ ಮೋಕ್ಷಗಳ ಬಗ್ಗೆ ಮಾತನಾಡುತ್ತಾ ವಾಸ್ತವದಿಂದ ದೂರವಿದ್ದರೆ ಅದು ಜನಸಾಮಾನ್ಯರಿಂದಲೂ ದೂರವಿರಬೇಕಾಗುತ್ತದೆ. ಇಂದು ಜಗತ್ತಿನ ಹಲವು ಧರ್ಮಗಳು ಕುಸಿತವಾಗಲು ಮುಖ್ಯ ಕಾರಣ, ಅದು ಮನುಷ್ಯನ ಮತ್ತು ಭೂಮಿಯ ನಿಜವಾದ ಸಮಸ್ಯೆಗಳಿಗೆ ವಿಮುಖವಾಗಿರುವುದು. ಈ ನಿಟ್ಟಿನಲ್ಲಿ ಇಸ್ಲಾಂ ಧರ್ಮ ಜಗತ್ತಿನಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣ, ಅದು ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಯಿತು ಎನ್ನುವುದನ್ನು ಹಲವು ಚಿಂತಕರು ಬೊಟ್ಟು ಮಾಡಿ ತೋರಿಸಿದ್ದಾರೆ. ಬಡವರು, ದುರ್ಬಲರು, ಮಹಿಳೆಯರ ಕುರಿತಂತೆ ಅದು ಹೊಂದಿದ್ದ ಧನಾತ್ಮಕ ಅಂಶಗಳು ಇಸ್ಲಾಂ ಧರ್ಮವನ್ನು ಜನಪ್ರಿಯಗೊಳಿಸಿತು ಎಂದು ಗಾಂಧೀಜಿ ಒಂದೆಡೆ ಹೇಳುತ್ತಾರೆ. ಇಸ್ಲಾಮ್‌ನ ಸಹೋದರತ್ವವನ್ನು ವಿವೇಕಾನಂದರು ಮೆಚ್ಚಿ ಮಾತನಾಡುತ್ತಾರೆ. ಇಸ್ಲಾಮ್ ಕೇವಲ ಮನುಷ್ಯನ ಅಗತ್ಯಗಳನ್ನಷ್ಟೇ ಮಾತನಾಡಿರುವುದಲ್ಲ, ಅವನಿಗೆ ಪೂರಕವಾಗಿರುವ ಪ್ರಕೃತಿಯ ಹಿರಿಮೆಯನ್ನು, ಮನುಷ್ಯನಿಗೆ ಅದರೊಡನೆ ಇರುವ ಹೊಣೆಗಾರಿಕೆಯನ್ನು ಆದ್ಯತಯ ಮೇಲೆ ಮಾತನಾಡುತ್ತದೆ. ಇಸ್ಲಾಮ್ ಧರ್ಮ ಪರಿಸರದ ಬಗ್ಗೆ ಯಾವ ಧೋರಣೆಯನ್ನು ತಾಳಿದೆ ಎನ್ನುವುದನ್ನು ವಿವರಿಸುವ ಪುಟ್ಟ ಕೃತಿ ಇ. ಅಬೂಬಕರ್ ಕಲೀಮ್ ಅವರ ‘ಪರಿಸರ, ಅಭಿವೃದ್ಧಿ, ಇಸ್ಲಾಮ್’. ಇದನ್ನು ಅಬ್ದುಲ್ ರಝಾಕ್ ಕೆಮ್ಮಾರ ಅನುವಾದಿಸಿದ್ದಾರೆ. ಇಸ್ಲಾಮ್ ಧರ್ಮದಲ್ಲಿ ಪರಿಸರದ ಬಹುಮುಖ್ಯ ಭಾಗವಾಗಿ ಮನುಷ್ಯನನ್ನು ಸೇರ್ಪಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಮನುಷ್ಯನ ಏಳಿಗೆಯ ಜೊತೆಗೇ ಪ್ರಕೃತಿಯ ಮೇಲೆ ಅವನಿಗಿರುವ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ. ಲೇಖಕರು ಈ ಹಿನ್ನೆಲೆಯಲ್ಲಿ ಕುರ್‌ಆನಿನ ಬೇರೆ ಬೇರೆ ಅಧ್ಯಾಯಗಳಲ್ಲಿರುವ ಶ್ಲೋಕಗಳನ್ನು ಮುಂದಿಡುತ್ತಾರೆ. ಹಾಗೆಯೇ ಭೌತಿಕ ಲೋಲುಪತೆ ಗಾಗಿ ಪ್ರಕೃತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಇಸ್ಲಾಮ್ ಹೇಗೆ ವಿರೋಧಿಸುತ್ತದೆ ಎನ್ನುವುದನ್ನೂ ಕೃತಿಯಲ್ಲಿ ಚರ್ಚಿಸುತ್ತಾರೆ. ‘‘ಒಂದು ಬೀಜವನ್ನು ಬಿತ್ತುವುದು ಅಥವಾ ಸಸಿಯನ್ನು ನೆಡುವುದು ಅತ್ಯಂತ ದೊಡ್ಡ ಪ್ರತಿಫಲಾರ್ಹ ಕರ್ಮವಾಗಿದೆ. ಒಂದು ಪಕ್ಷಿ, ಮನುಷ್ಯ ಅಥವಾ ಮೃಗಗಳು ಅದರ ಫಲಗಳನ್ನು ತಿಂದರೂ ಅದರ ಪ್ರತಿಫಲವು ಆತನಿಗೆ ಲಭಿಸದೇ ಇರದು’’ ಎಂಬ ಪ್ರವಾದಿ ವಚನವನ್ನು ಲೇಖಕರು ನೆನಪಿಸುತ್ತಾರೆ. ಇಂತಹ ಹತ್ತುಹಲವು ವಚನಗಳನ್ನು ಮುಂದಿಡುತ್ತಾ ಪರಿಸರ ರಕ್ಷಣೆಯ ಅಗತ್ಯವನ್ನು ಲೇಖಕರು ಹೇಳುತ್ತಾರೆ. ಪರಿಸರ ರಕ್ಷಣೆಯೆಂದರೆ ಸ್ವತಃ ಮನುಷ್ಯ ತನಗೆ ತಾನೇ ಮಾಡಿಕೊಳ್ಳುವ ಉಪಕಾರ ಎನ್ನುವುದನ್ನು ಸರಳವಾಗಿ ಲೇಖಕರು ವ್ಯಾಖ್ಯಾನಿಸುತ್ತಾರೆ. ಪರಿಸರದ ದುರಂತಕ್ಕೆ ಮನುಷ್ಯನ ಅತೀ ಭೋಗಾಸಕ್ತಿಯೇ ಕಾರಣ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಸ್ತುತಿ ಪಬ್ಲಿಕೇಶನ್ಸ್ ಆ್ಯಂಡ್ ಇನ್ಫಾರ್ಮೇಶನ್ ಟ್ರಸ್ಟ್ ಹೊರತಂದಿರುವ ಈ ಕಿರು ಕೃತಿಯ ಮುಖಬೆಲೆ 30 ರೂ. 

share
-ಕಾರುಣ್ಯಾ
-ಕಾರುಣ್ಯಾ
Next Story
X