Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂವಿಧಾನವನ್ನು ಉಸಿರಾಡಿ...

ಸಂವಿಧಾನವನ್ನು ಉಸಿರಾಡಿ ಮನುಶಾಸ್ತ್ರವನ್ನು ಹೊರಬಿಟ್ಟರೇ?

ವಾರ್ತಾಭಾರತಿವಾರ್ತಾಭಾರತಿ1 Jun 2017 12:22 AM IST
share

ಟಿವಿಯಲ್ಲಿ ಬ್ರಹ್ಮಾಂಡ ಜ್ಯೋತಿಷಿಯೊಬ್ಬ ಬಾಯಿಗೆ ಬಂದಂತೆ ವದರುವುದನ್ನು ನಾವು ಆಘಾತದಿಂದ ಕೇಳಿದ್ದೇವೆ. ಜ್ಯೋತಿಷಿ, ವಾಸ್ತುಶಾಸ್ತ್ರಜ್ಞರು, ಮಂತ್ರವಾದಿಗಳು ಎಂದು ಹೇಳಿ ಜನರನ್ನು ಹಾದಿ ತಪ್ಪಿಸುವ ಇವರು ಇಂದು ಗಲ್ಲಿಗೊಬ್ಬರಂತೆ ಸಿಗುತ್ತಾರೆ. ಮೋಸಹೋಗುವವರು ಇರುವವರೆಗೂ ಇವರೆಲ್ಲ ನಮ್ಮ ನಡುವೆ ಓಡಾಡುತ್ತಲೇ ಇರುತ್ತಾರೆ. ಆದರೆ ಇವರು ಹೇಳಿರುವುದನ್ನು ನಾವು ನಂಬಬೇಕೆಂದಿಲ್ಲ. ಯಾಕೆಂದರೆ ಇವರ್ಯಾರೂ ಈ ಪ್ರಜಾಸತ್ತೆಯ ಅಥವಾ ಸಂವಿಧಾನದ ಅಧಿಕೃತ ವಕ್ತಾರರಲ್ಲ. ನಾವಿಂದು ನಿಜಕ್ಕೂ ಹೆದರಬೇಕಾದುದು ವಿದ್ಯಾವಂತರೆಂದು ಕರೆಸಿಕೊಂಡು ಅತ್ಯುನ್ನತ ಹುದ್ದೆಯಲ್ಲಿದ್ದು ಕಂದಾಚಾರವನ್ನು ನಂಬಿ, ಪ್ರೋತ್ಸಾಹಿಸುವವರ ಬಗ್ಗೆ. ಇಂಥವರು ಈ ದೇಶದ ನ್ಯಾಯಾಲಯದಂತಹ ಅತ್ಯುನ್ನತ ಸ್ಥಾನದಲ್ಲಿದ್ದರೆ ಎಂತಹ ಅನಾಹುತಗಳು ಸಂಭವಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾದ ಮಹೇಶ್ಚಂದ್ ಶರ್ಮಾ ಎಂಬವರಿದ್ದಾರೆ.

ತನ್ನ ನಿವೃತ್ತಿಯ ಕೊನೆಯ ಕ್ಷಣದಲ್ಲಿ ಇವರು ಗೋವಿನ ಕುರಿತಂತೆ ನೀಡಿರುವ ತೀರ್ಪು ಸಂವಿಧಾನಕ್ಕೆ ಬಹುದೊಡ್ಡ ಕಳಂಕವಾಗಿ ಪರಿಣಮಿಸಿದೆ. ತಾನು ತೀರ್ಪು ನೀಡುವ ಸಂದರ್ಭದಲ್ಲಿ ಸಂವಿಧಾನದ ಎಲ್ಲ ಅಂಶಗಳನ್ನು ಉಲ್ಲಂಘಿಸಿ, ಯಾವುದೋ ಕವಡೆಶಾಸ್ತ್ರಜ್ಞನೊಬ್ಬನ ಮಾತುಗಳ ಆಧಾರದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಎಂದು ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ.

ಜನಸಾಮಾನ್ಯರ ಆಹಾರದ ಹಕ್ಕನ್ನು ಸಂರಕ್ಷಿಸುವ ಹಿನ್ನೆಲೆಯಲ್ಲಿ ಮಂಗಳವಾರ ಮದ್ರಾಸ್ ಹೈಕೋರ್ಟ್, ಕೇಂದ್ರ ಸರಕಾರದ ಗೋಮಾರಾಟ ನಿಯಂತ್ರಣದ ಆದೇಶದ ವಿರುದ್ಧ ತಡೆಯನ್ನು ನೀಡಿತ್ತು. ಈ ಸಂದರ್ಭದಲ್ಲಿ ಸಂವಿಧಾನ ನೀಡಿರುವ ಹಕ್ಕಗಳನ್ನು ಮುಂದಿಟ್ಟುಕೊಂಡು ತನ್ನ ತೀರ್ಪು ನೀಡಿತ್ತು. ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ಬಹುತೇಕ ಸರಕಾರಗಳು ಕೇಂದ್ರದ ಸೂಚನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದವು. ಇದು ಹೇಗೆ ರೈತರನ್ನು ಬೀದಿಪಾಲು ಮಾಡುತ್ತದೆ ಮತ್ತು ಅರ್ಥವ್ಯವಸ್ಥೆಯನ್ನು ಅಧ್ವಾನಗೊಳಿಸುತ್ತದೆ ಎನ್ನುವ ಆತಂಕವನ್ನು ಹಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದರು.

ಒಂದು ವೇಳೆ ಈ ಆದೇಶ ಜಾರಿಗೆ ಬಂದದ್ದೇ ಆದರೆ ಗ್ರಾಮೀಣ ಹೈನೋದ್ಯಮ ನಾಶವಾಗುತ್ತದೆ. ನಿಷ್ಪ್ರಯೋಜಕ ಗೋವುಗಳನ್ನು ಸಾಕುವ ಆರ್ಥಿಕ ಹೊರೆ ಸರಕಾರದ ಮೇಲೆ ಬೀಳುತ್ತದೆ. ಮಾಂಸಾಹಾರದ ಬೆಲೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ. ಇದರ ಪರಿಣಾಮ ನಿಧಾನಕ್ಕೆ ಇತರ ತರಕಾರಿಗಳ ಮೇಲೂ ಬೀಳುತ್ತದೆ. ದೇಶದಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಆದುದರಿಂದ, ಗೋಹತ್ಯೆ ನಿಷೇಧವೆನ್ನುವುದು ಕೇವಲ ಆಹಾರ ವಿಷಯವಷ್ಟೇ ಅಲ್ಲ. ಒಟ್ಟು ಅರ್ಥವ್ಯವಸ್ಥೆಗೆ ಸಂಬಂಧಪಟ್ಟ ವಿಷಯ. ಇವೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು, ಮದ್ರಾಸ್ ಹೈಕೋರ್ಟ್ ಕೇಂದ್ರದ ಆದೇಶಕ್ಕೆ ತಡೆ ನೀಡಿ, ಸ್ಪಷ್ಟೀಕರಣ ನೀಡಲು ಸರಕಾರಗಳಿಗೆ ಸೂಚನೆ ನೀಡಿತ್ತು. ಇದಾದ ಬೆನ್ನಿಗೇ ಬುಧವಾರದಂದು ರಾಜಸ್ಥಾನದ ಹೈಕೋರ್ಟ್ ಇನ್ನೊಂದು ತೀರ್ಪನ್ನು ನೀಡಿತು.

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದಿರುವ ಹೈಕೋರ್ಟ್, ಗೋಹತ್ಯೆಗೈದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸೂಚನೆ ನೀಡಿದೆ. ಒಬ್ಬ ನ್ಯಾಯಾಧೀಶರಿಗೆ ತೀರ್ಪು ನೀಡುವ ಹಕ್ಕೇನೋ ಇದೆ. ಆದರೆ ಅವರ ತೀರ್ಪು ಸಂವಿಧಾನದ ಆಧಾರದ ಮೇಲೆ ನಿಂತಿರಬೇಕು. ಆಘಾತಕಾರಿಯಾದ ಅಂಶವೆಂದರೆ, ತಮ್ಮ ತೀರ್ಪಿಗೆ ನ್ಯಾಯಾಧೀಶರು ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಉತ್ಪ್ರೇಕ್ಷೆಯ ಸ್ಟೇಟಸ್‌ಗಳನ್ನು ಆಧಾರವಾಗಿಸಿಕೊಂಡಿದ್ದಾರೆ. ಯಾವನೇ ಒಬ್ಬ ವಿದ್ಯಾವಂತನೆಂದು ಕರೆಸಿಕೊಳ್ಳುವ ವ್ಯಕ್ತಿ ನಂಬಲು ಅಸಾಧ್ಯವಾಗಿರುವ ವೌಢ್ಯಗಳನ್ನು ಬಳಸಿಕೊಂಡು ಅವರು ಸರಕಾರಕ್ಕೆ ಸೂಚನೆಗಳನ್ನು ನೀಡಿದ್ದಾರೆ.

ರಾಜಸ್ಥಾನದ ನ್ಯಾಯಾಧೀಶರ ತೀರ್ಪು ಯಾಕೆ ಪ್ರಶ್ನಾರ್ಹ ಎನ್ನುವುದನ್ನು ಒಂದಿಷ್ಟು ಅವಲೋಕಿಸೋಣ. ರಾಜಸ್ಥಾನದ ಈ ನ್ಯಾಯಾಧೀಶರ ಪ್ರಕಾರ ಗೋವು ಆಮ್ಲಜನಕವನ್ನು ಸೇವಿಸಿ, ಆಮ್ಲಜನಕವನ್ನೇ ಹೊರಗೆ ಬಿಡುತ್ತದೆಯಂತೆ. ಇದನ್ನು ಅವರಿಗೆ ಕಲಿಸಿದ ವಿಜ್ಞಾನವಾದರೂ ಯಾವುದು? ಇತ್ತೀಚೆಗೆ ಕೆಲವು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಇಂತಹದೇ ಸುಳ್ಳುಗಳನ್ನು ಹೇಳುತ್ತಾ ಓಡಾಡುತ್ತಿದ್ದಾರೆ. ಆದರೆ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ಒಬ್ಬ ನ್ಯಾಯಾಧೀಶ ಇದನ್ನು ನಂಬಿ ತೀರ್ಪನ್ನು ಕೊಟ್ಟರೆ ಇನ್ನು ಈ ದೇಶವರನ್ನು ರಕ್ಷಿಸುವವರು ಯಾರು?

ನಿವೃತ್ತರಾಗಿ ಹೋಗಲಿರುವ ಈ ನ್ಯಾಯಾಧೀಶರ ನಂಬಿಕೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಗೋವು ಸರ್ವರೋಗಗಳನ್ನು ನಿವಾರಿಸುವ ಆಸ್ಪತ್ರೆ ಎಂದು ಅವರು ಭಾವಿಸಿದ್ದಾರೆ. ಗೋಮೂತ್ರ ಸೇವನೆಯಿಂದ ವ್ಯಕ್ತಿಯ ಹಿಂದಿನ ಜನ್ಮದಲ್ಲಿನ ಪಾಪಗಳು ತೊಳೆದು ಹೋಗುತ್ತವೆ. ಗೋವು ತನ್ನ ಕೋಡುಗಳ ಮೂಲಕ ಕಾಸ್ಮಿಕ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಗೋವಿನ ಸೆಗಣಿಯು ಕಾಲರಾ ಕ್ರಿಮಿಗಳನ್ನು ಕೊಲ್ಲುತ್ತವೆ...ಹೀಗೆ ಮುಂದುವರಿಯುತ್ತದೆ ಇವರ ಗೋಪುರಾಣ. ಇವೆಲ್ಲಕ್ಕಿಂತಲೂ ಆಘಾತಕಾರಿಯಾದ ಇನ್ನೊಂದು ಅಂಶವನ್ನು ಈ ನ್ಯಾಯಾಧೀಶರು ಸುದ್ದಿಗಾರರೊಂದಿಗೆ ಹಂಚಿಕೊಂಡರು.

ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಆದೇಶಕ್ಕೆ ನವಿಲಿನ ಥಿಯರಿಯೊಂದನ್ನು ಬಳಸಿದರು. ಗಂಡು ನವಿಲು ಬ್ರಹ್ಮಚಾರಿಯಂತೆ. ಅಂದರೆ ಅವೆರಡು ಪರಸ್ಪರ ಲೈಂಗಿಕಕ್ರಿಯೆಯನ್ನು ನಡೆಸುವುದಿಲ್ಲವಂತೆ. ಗಂಡು ನವಿಲಿನ ಕಣ್ಣಿನಲ್ಲಿ ಬರುವ ನೀರನ್ನು ಹೀರಿಕೊಂಡು ಹೆಣ್ಣು ನವಿಲು ಗರ್ಭ ಧರಿಸಿ, ಮೊಟ್ಟೆ ಇಡುತ್ತದೆಯಂತೆ. ಯಾರೋ ಒಬ್ಬ ಜ್ಯೋತಿಷಿ ಅಥವಾ ರಾಜಕಾರಣಿ ಇದನ್ನು ಹೇಳಿದ್ದರೂ ಸಹಿಸಿಕೊಳ್ಳಬಹುದಿತ್ತೇನೋ. ಆದರೆ ಹೈಕೋರ್ಟ್‌ನ ಅತ್ಯುನ್ನತ ಸ್ಥಾನದಲ್ಲಿ ನಿಂತು ಸಂವಿಧಾನವನ್ನು ಉಳಿಸಬೇಕಾದ ನ್ಯಾಯಾಧೀಶರೊಬ್ಬರು ಇಂತಹದೊಂದು ಹೇಳಿಕೆಯನ್ನು ನೀಡಿದ್ದಾರೆ ಎಂದ ಮೇಲೆ, ಈ ದೇಶದ ನ್ಯಾಯ ವ್ಯವಸ್ಥೆಯ ಗತಿಯೇನಾಗಬೇಕು? ಒಂದು ವೇಳೆ ಇದೆಲ್ಲವೂ ನ್ಯಾಯಾಧೀಶರೊಬ್ಬರ ವೈಯಕ್ತಿಕ ನಂಬಿಕೆಯಾಗಿರಬಹುದು. ಆದರೆ ಅದನ್ನು ಸಂವಿಧಾನದ ಮೇಲೆ ಹೇರುವ ಹಕ್ಕು ನ್ಯಾಯಾಧೀಶರಿಗಿದೆಯೇ? ಅಥವಾ ತನ್ನ ಈ ತೀರ್ಪಿನ ಮೂಲಕ ಕೇಂದ್ರ ಸರಕಾರವನ್ನೇ ಅವರು ತಮಾಷೆ ಮಾಡಿರಬಹುದೇ? ಅಥವಾ ವ್ಯಂಗ್ಯವಾಡಿರಬಹುದೇೆ?

ಯಾಕೆಂದರೆ ಎಂತಹ ಅಶಿಕ್ಷಿತನೂ ಇಷ್ಟರಮಟ್ಟಿಗೆ ತನ್ನ ದಡ್ಡತನವನ್ನು ಮಾಧ್ಯಮಗಳ ಮೂಲಕ ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ. ಇಷ್ಟಕ್ಕೂ ರಾಜಸ್ಥಾನದ ಹೈಕೋರ್ಟ್‌ನಲ್ಲಿ ಇಂತಹದೊಂದು ತೀರ್ಪು ನೀಡಿರುವುದೇ ಗೋಶಾಲೆಯಲ್ಲಿ 500ಕ್ಕೂ ಅಧಿಕ ಗೋವುಗಳು ಹಸಿವಿನಿಂದ ಸತ್ತ ಹಿನ್ನೆಲೆಯಲ್ಲಿ. ಗೋಶಾಲೆ ಎನ್ನುವುದೇ ಎಷ್ಟು ಅವೈಜ್ಞಾನಿಕ ಎನ್ನುವುದನ್ನು ಇದು ತಿಳಿಸುತ್ತದೆ. ಗೋಮಾಂಸಾಹಾರಿಗಳು ಹೈನೋದ್ಯಮದ ಒಂದು ಭಾಗ. ನಿಷ್ಪ್ರಯೋಜಕ ಗೋವುಗಳನ್ನು ಮಾಂಸವಾಗಿ ಬಳಸುವುದರಿಂದ ರೈತರಿಗೆ ಅಪಾರ ಲಾಭವಿದೆ. ಆದರೆ ಅವುಗಳನ್ನು ಮಾರಾಟ ಮಾಡಲು ಅವರಿಗೆ ಅವಕಾಶ ನೀಡದೆ, ಗೋಶಾಲೆಗಳಿಗೆ ಸೇರ್ಪಡೆಯಾದರೆ ಅಂತಿಮವಾಗಿ ಗೋವುಗಳ ಸ್ಥಿತಿ ಏನಾಗುತ್ತದೆ ಎನ್ನುವುದಕ್ಕೆ ರಾಜಸ್ಥಾನದ ಗೋಶಾಲೆಗಳೇ ಉದಾಹರಣೆ ಮತ್ತು ಎಲ್ಲ ರೀತಿಯಲ್ಲೂ ಗೋಮಾಂಸಾಹಾರಿಗಳನ್ನು ಪ್ರೋತ್ಸಾಹಿಸಲು ರಾಜಸ್ಥಾನದ ಹಿಂಗೋನಿಯಾದ ಗೋಶಾಲೆಯ ದುರಂತ ಸಾಕು. ಆದರೆ ಈ ದಿಕ್ಕಿನಲ್ಲಿ ಯೋಚಿಸುವುದು ಬಿಡಿ, ತನ್ನ ತೀರ್ಪಿನ ಮೂಲಕ ನ್ಯಾಯಾಧೀಶರು ಸಂವಿಧಾನವನ್ನೇ ಅಪಹಾಸ್ಯ ಮಾಡಿದರು. ವಿಜ್ಞಾನವನ್ನು ಕಾಲಲ್ಲಿ ಒದ್ದರು. ಜೊತೆಗೆ ಈ ದೇಶದ ಗೋಪ್ರೇಮಿಗಳ ಬೌದ್ಧಿಕ ದಿವಾಳಿತನದ ಎತ್ತರವನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು. ಗೋವು ಆಮ್ಲಜನಕವನ್ನು ಸೇವಿಸಿ ಆಮ್ಲಜನಕವನ್ನು ಹೊರಬಿಡುತ್ತದೆಯೋ ಇಲ್ಲವೋ, ಆದರೆ ಇಂದು ನ್ಯಾಯಾಧೀಶರೆನಿಸಿಕೊಂಡವರು ಸಂವಿಧಾನವನ್ನು ಸೇವಿಸಿ ಮನುಶಾಸ್ತ್ರವನ್ನು ಹೊರಬಿಡುತ್ತಿರುವುದು ದೇಶದ ದೌರ್ಭಾಗ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X