ರಿಯಾದ್: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ವಾರ್ಷಿಕ ಮಹಾಸಭೆ

ರಿಯಾದ್, ಜೂ.1: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ(ಡಿ.ಕೆ.ಎಂ.ಒ.), ರಿಯಾದ್ ಇದರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಅಝೀಝ್ ಬಣಕಲ್ ಅಧ್ಯಕ್ಷತೆಯಲ್ಲಿ ಭತ್ತ ರಮದಾ ಹೋಟೆಲ್'ನ ಬಾಂಕ್ವೆಟ್ ಹಾಲ್'ನಲ್ಲಿ ಇತ್ತೀಚೆಗೆ ನಡೆಯಿತು.
ಫರ್ವೇಝ್ ಅಲಿ ಸಭೆಯನ್ನು ಉದ್ಘಾಟಿಸಿದರು.
ಡಿ.ಕೆ.ಎಂ.ಒ. ಪ್ರಧಾನ ಕಾರ್ಯದರ್ಶಿ ಫಝ್ಲ್ ರಹಿಮಾನ್ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮುಖ್ಯ ಅತಿಥಿ ಎ.ಐ.ಎಂ.ಟಿ.ಟಿ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕುತ್ಬುದ್ದೀನ್ ನಕ್ವಾಡಿ ಮಾತನಾಡಿ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಅಥಿತಿಗಳಾಗಿ ವೇದಿಕೆಯಲ್ಲಿ ಅಖ್ತರ್ ಶೇಖ್ ಬಶೀರ್ ಎನ್.ಸಿ.ಎಂ.ಎಸ್. ಉಪಸ್ಥಿತರಿದ್ದರು. ಡಿ.ಕೆ.ಎಂ.ಒ. ಅಧ್ಯಕ್ಷ ಅಬ್ದುಲ್ ಅಝೀಜ್ ಬಣಕಲ್ ಮಾತನಾಡಿ, ತನ್ನ ಅಧಿಕಾರವಧಿಯಲ್ಲಿ ತನಗೆ ಸಕ್ರಿಯ ಬೆಂಬಲ ನೀಡಿದ ಎಲ್ಲ ಸದಸ್ಯರು ಮತ್ತು ಕಾರ್ಯಕಾರಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ದಕ್ಷಿಣ ಕರ್ನಾಟಕದಲ್ಲಿ ಡಿ.ಕೆ.ಎಂ.ಒ. ಕಾರ್ಯಚಟುವಟಿಕೆಗಳಿಗೆ ಸರ್ವ ಸಹಕಾರಗಳನ್ನು ನೀಡುತ್ತಿರುವ ಉಮರ್ ಯು.ಎಚ್., ಅಡ್ವೋಕೇಟ್ ಮುಹಮ್ಮದ್ ಹನೀಫ್, ಟಿ.ಆರ್.ಎಫ್. ಸಲಹೆಗಾರ ರಫೀಕ್ ಮಾಸ್ಟರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಫ್ಯಾಮಿಲಿ ರಿಲೀಫ್ ಫಂಡ್ ಯೋಜನೆಯ ಬಗೆ ವಿವರಿಸಿದ ಅವರು, ಒಕ್ಕೂಟದ ಅನಿವಾಸಿ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಡಿ.ಕೆ.ಎಂ.ಒ. ಸದಸ್ಯತ್ವ ಅಭಿಯಾನದಲ್ಲಿ ಅತೀ ಹೆಚ್ಚು ಸದಸ್ಯರನ್ನು ಮಾಡಿದ ಶಾಫಿ ತೋಡಾರು ಮತ್ತು ಫಝುಲ್ ರಹಮಾನ್ ಅವರನ್ನುಈ ವೇಳೆ ಸನ್ಮಾನಿಸಲಾಯಿತು.
ಹನೀಫ್ ಪಣಂಬೂರು ಮತ್ತು ಹಮೀದ್ ವೆಂಜ್ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಬಜ್ಪೆ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆಸೀಫ್ ಕಣ್ಣೂರು, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಸುಲೈಮಾನ್ ಎರ್ಮಾಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ ಜೋಕಟ್ಟೆ, ಫಝ್ಲ್ ರಹ್ಮಾನ್ ಗಂಗೊಳ್ಳಿ, ಜತೆ ಕಾರ್ಯದರ್ಶಿಗಳಾಗಿ ಇಸ್ಮಾಯೀಲ್ ಮೊಂಟೆಪದವು, ಮುಹಮ್ಮದ್ ಇಮ್ರಾನ್, ಜಂಟಿ ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಸುಳ್ಯ, ಶೇಖ್ ಜಿ. ಕೆ.ಕೂಳೂರು ಆಯ್ಕೆಯಾದರು.
ಈವೆಂಟ್ ಸಂಘಟಕರಾಗಿ ಸಲ್ಮಾನ್ ನೂರ್ ಮಂಗಳೂರು, ಹನೀಫ್ ಎನ್.ಎಸ್., ರಿಲೀಫ್ ಕೋ ಆರ್ಡಿನೇಟರ್ ಆಗಿ ಅಶ್ರಫ್ ಕೋಝಿಕಾನ್ ಮಂಗಳೂರು, ಎಫ್.ಆರ್.ಎಫ್. ಕೋ ಆರ್ಡಿನೇಟರ್ ಆಗಿ ಇಲ್ಯಾಸ್ ಮೊಯ್ದಿನ್ ಎರ್ಮಾಲ್, ಮೀಡಿಯಾ ಕೋ ಆರ್ಡಿನೇಟರ್ ಆಗಿ ಬಶೀರ್ ತಲಪಾಡಿ, ಆ್ಯಂಟಿ ಡೌರಿ ಕೋ ಆರ್ಡಿನೇಟರ್ ಆಗಿ ಕೆ.ಪಿ.ಅಬ್ದುಲ್ ಮರಿಕ್ಕಲ, ಲೋನ್ ಕೋ ಆರ್ಡಿನೇಟರ್ ಆಗಿ ಘನಿ ಅಹ್ಮದ್ ಮುಲ್ಕಿ ಹಾಗೂ 24 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುಹಿಯುದ್ದೀನ್ ಝುಹರಿ ಕಿರಾಅತ್ ಪಠಿಸಿದರು. ಅಬ್ದುಲ್ ರಹ್ಮಾನ್ ಸುಲೈಮಾನ್ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ವಂದಿಸಿದರು.







