ಜೈನ ಮಠದಲ್ಲಿ ಅಲಂಗಾರು ಚರ್ಚ್ ಧರ್ಮಗುರುವಿಗೆ ಸನ್ಮಾನ

ಮೂಡುಬಿದಿರೆ, ಜೂ.1: ಅಲಂಗಾರು ಹೋಲಿ ರೋಸರಿ ಚರ್ಚ್‌ನಲ್ಲಿ ಏಳು ವರ್ಷಗಳಿಂದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಈಗ ಮಡಂತ್ಯಾರ್ ಚರ್ಚ್‌ಗೆ ವರ್ಗಾವಣೆಗೊಂಡಿರುವ ರೆ. ಫಾ.ಬಾಸಿಲ್ ವಾಝ್ ಅವರನ್ನು ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸನ್ಮಾನಿಸಿ ಶುಭ ಹಾರೈಸಿದರು.
ಪುರಸಭಾ ಸದಸ್ಯ ಎಂ.ಬಾಹುಬಲಿ ಪ್ರಸಾದ್ ಅವರು ಫಾ.ಬಾಸಿಲ್ ವಾಝ್ ಅವರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಪಟ್ಣ ಶೆಟ್ಟಿ, ಎಂ.ಸುದೇಶ್ ಕುಮಾರ್, ಆನಡ್ಕ ದಿನೇಶ ಕುಮಾರ್, ಮತ್ತು ಶ್ರಾವಕ- ಶ್ರಾವಕಿಯರು ಉಪಸ್ಥಿತರಿದ್ದರು. ಜೈನಮಠದ ವ್ಯವಸ್ಥಾಪಕ ಎಂ. ಸಂಜಯಂತ ಕುಮಾರ್ ವಂದಿಸಿದರು.
Next Story





