ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸಿಪಿಎಂ ಶಾಸಕ ಭಾಗಿ: ವಿವಾದ ಸ್ಫೋಟ

ತೃಶೂರ್, ಜೂ.1: ಆರೆಸ್ಸೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಪಿಎಂ ಶಾಸಕರ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ ಊರಗಂ ಎನ್ನುವಲ್ಲಿ ನಡೆದ ಕಾರ್ಯಕ್ರಮದಲ್ಲಿ ಇರಿಂಙಾಲಕ್ಕೂಡ್ ಶಾಸಕ ಪ್ರೊ.ಕೆ.ಯು. ಅರುಣನ್ ಭಾಗವಹಿಸಿದ್ದರು.
ಆರೆಸ್ಸೆಸ್ ಸೇವಾಪ್ರಮುಖ್ ಆಗಿದ್ದ ಕುಂಞಿಕಣ್ಣನ್‌ರ ಸ್ಮರಣಾರ್ಥ ಊರಗಂ ಶಾಖೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿದ್ದಾರೆ. ಕಾಂಗ್ರೆಸ್ ಶಾಸಕ ವಿ.ಟಿ.ಬಲರಾಂ ಶಾಸಕರ ವರ್ತನೆಯನ್ನು ವಿರೋಧಿಸಿ ಫೇಸ್‌ಬುಕ್‌ನಲ್ಲಿಪೋಸ್ಟ್ ಹಾಕಿದ್ದರು. ಹಗಲು ಸಿಪಿಎಂ,ಹಗಲಲ್ಲೇ ಆರೆಸ್ಸೆಸ್ ಎಂದು ಹ್ಯಾಷ್‌ಟ್ಯಾಗ್‌ಮೂಲಕ ಬಲರಾಂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆರೆಸ್ಸೆಸ್ ಕಾರ್ಯಕ್ರಮದಲ್ಲಿಆರೆಸ್ಸೆಸ್ ಪಾಲ್ಗೊಂಡ ಫೋಟೊ ವೈರಲ್ ಆಗಿದ್ದರಿಂದ ಸಿಪಿಎಂ ಜಿಲ್ಲಾ ನೇತೃತ್ವವು ಶಾಸಕರಿಂದ ವಿವರಣೆ ಕೇಳಿದೆ.
ಕಳೆದ ವಿಧಾನಸಭಾ ಸಮ್ಮೇಳನದಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಕೆ.ಯು. ಅರುಣನ್ ಭಾರತದ 1983ರ ವಿಶ್ವಕಪ್‌ಗೆದ್ದ ತಂಡದಲ್ಲಿ ಯುವರಾಜ್‌ಸಿಂಗ್ ಇದ್ದರು ಎಂದು ಹೇಳಿದ್ದರು. ಇದು ಟ್ರಾಲರ್‌ಗಳ ಟೀಕೆಗೆ ದೊಡ್ಡ ಅಸ್ತವಾಗಿತ್ತು.





