ಮೂಡುಬಿದಿರೆ: ನಿವೃತ್ತಿಗೊಂಡ ಉಪ ತಹಶೀಲ್ದಾರ್‌ಗೆ ಸನ್ಮಾನ

ಮೂಡುಬಿದಿರೆ, ಜೂ.1: ಕಂದಾಯ ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವ ಮೂಡುಬಿದಿರೆ ಉಪ ತಹಶೀಲ್ದಾರ್ ಅಬ್ದುಲ್ ರಹ್ಮಾನ್ ಅವರಿಗೆ ಮೂಡುಬಿದಿರೆ ತಹಶೀಲ್ದಾರ್ ಕಚೇರಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ ರಹ್ಮಾನ್, ಕರ್ತವ್ಯಗಳನ್ನು ಹೊರೆ ಎಂದು ಭಾವಿಸದೆ ನಿಸ್ವಾರ್ಥದಿಂದ ನಿಭಾಯಿಸಿದರೆ, ಸುಸೂತ್ರವಾಗಿ ನಡೆಯುತ್ತಿದೆ. ವೃತ್ತಿ ಜೀವನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಹಕರಿಸಿದ ಇಲಾಖೆ ಸಿಬ್ಬಂದಿ, ಮೇಲಾಧಿಕಾರಿಗಳಿಗೆ ಚಿರಋಣಿ ಎಂದರು.
ಮೂಡುಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಂದಾಯ ಇಲಾಖೆಯಲ್ಲಿನ ತಮ್ಮ ಅಗಾಧ ಜ್ಞಾನದೊಂದಿಗೆ ಮೂಡುಬಿದಿರೆ ತಹಶೀಲ್ದಾರ್ ಕಚೇರಿಯ ಕೆಲಸಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಿರುವ ಅಬ್ದುಲ್ ರಹ್ಮಾನ್ ಅವರು ಇತರ ಅಧಿಕಾರಿ, ಕಂದಾಯ ಸಿಬ್ಬಂದಿಗಳಿಗೆ ಮಾದರಿ ಎಂದರು.
ಸರ್ವೇ ಮೇಲ್ವಿಚಾರಕ ವೆಂಕಟೇಶ್, ಮೂಡುಬಿದಿರೆ ಪುರಸಭೆಯ ಕಂದಾಯ ಅಧಿಕಾರಿ ಧನಂಜಯ್, ನಾಡಕಚೇರಿ ಕಂದಾಯ ಅಧಿಕಾರಿ ಹಾರಿಸ್, ಸುಂದರ್ ಸಿ.ಪೂಜಾರಿ ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ಅವರ ವೃತ್ತಿ ಜೀವನದ ಕುರಿತು ಗ್ರಾಮ ಕರಣಿಕರಾದ ಗೋಪಾಲ್, ಸುರೇಶ್, ಶಂಕರ್, ಗ್ರಾಮ ಸಹಾಯಕಾರದ ಪ್ರಕಾಶ್, ರವಾನಂದ, ಪ್ರಕಾಶ್ ಮಾತನಾಡಿದರು.





