Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅತ್ತಾವರದ ‘ಟೌನ್ ಟೇಬಲ್ಸ್...

ಅತ್ತಾವರದ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನಲ್ಲಿ ರಮಝಾನ್ ಸ್ಪೆಷಲ್

ಮುಂಬೈ ಶೈಲಿಯ ಸ್ವಾದಿಷ್ಟಕರ ಖಾದ್ಯಗಳ ಪರಿಚಯ, "ಚಿಕನ್-ಮಟನ್ ಬೈದ ರೋಟಿ" ಇಲ್ಲಿನ ವಿಶೇಷ

ವಾರ್ತಾಭಾರತಿವಾರ್ತಾಭಾರತಿ1 Jun 2017 7:41 PM IST
share
ಅತ್ತಾವರದ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನಲ್ಲಿ ರಮಝಾನ್ ಸ್ಪೆಷಲ್

ಮಂಗಳೂರು, ಜೂ.1: ನಗರದ ಅತ್ತಾವರದಲ್ಲಿರುವ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ ರಮಝಾನ್ ಸ್ಪೆಷಲ್ (ಇಫ್ತಾರ್) ನಿಂದ ಉಪವಾಸಿಗರ ಗಮನ ಸೆಳೆಯುತ್ತಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಮೀಪದ ಅತ್ತಾವರ ರಸ್ತೆಯ ಸ್ಕೈ ಕೋರ್ಟ್ ಬಿಲ್ಡಿಂಗ್‌ನಲ್ಲಿರುವ ಈ ರೆಸ್ಟೋರೆಂಟ್‌ನಲ್ಲಿ ರಮಝಾನ್ ಪ್ರಯುಕ್ತ ಹಗಲು ಹೊತ್ತು ವ್ಯವಹಾರವಿಲ್ಲ. ಆದರೆ ಅಪರಾಹ್ನ 3:30 ಗಂಟೆಯಾಗುತ್ತಲೇ ರೆಸ್ಟೋರೆಂಟ್‌ನ ಮುಂದೆ ಡೆಮೋ ಮಾದರಿಯಲ್ಲಿ ಚೆಫ್‌ಗಳು ಮುಂಬೈ ಶೈಲಿಯ ಶುಚಿ-ರುಚಿಯಾದ ಖಾದ್ಯಗಳ ತಯಾರಿಯಲ್ಲಿ ತೊಡಗುತ್ತಾರೆ.

ಅಸರ್ ನಮಾಝ್ ಬಳಿಕ ಅವುಗಳ ಖರೀದಿಗೆ ಜನರು ಮುಗಿಬೀಳುತ್ತಾರೆ. ಅದರಲ್ಲಿ ಮುಸ್ಲಿಮೇತರರೂ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಮಗ್ರಿಬ್ ಅಝಾನ್ ಸದ್ಯ 6:55ಕ್ಕೆ ಆಗುತ್ತದೆಯಾದರೂ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನ ವ್ಯವಹಾರ ರಾತ್ರಿ 8 ಗಂಟೆಯವರೆಗೂ ಸಾಗುತ್ತದೆ.

ಮುಂಬೈಯ ಇಮ್ರಾನ್ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನ ಸ್ಥಾಪಕ. ವರ್ಷದ ಹಿಂದೆ ಮಂಗಳೂರಿನಲ್ಲಿ ರೆಸ್ಟೋರೆಂಟ್ ತೆರೆದ ಅವರು ತನ್ನ ಸ್ನೇಹಿತರ ಸಲಹೆಯ ಮೇರೆಗೆ ರಮಝಾನ್‌ನಲ್ಲಿ ಮುಂಬೈ ಶೈಲಿಯ ಸ್ವಾದಿಷ್ಟಕರ ಖಾದ್ಯಗಳನ್ನು ಪರಿಚಯಿಸಲು ಮುಂದಾದರು. ಆರಂಭದಲ್ಲಿ 10-15 ಬಗೆಯ ಖಾದ್ಯಗಳನ್ನು ತಯಾರಿಸಿದರು. ಎರಡು ಮೂರು ದಿನದಲ್ಲೇ ಇದರ ರುಚಿಗೆ ಮಾರುಹೋದ ಖಾದ್ಯಪ್ರಿಯರು ತನ್ನ ಸ್ನೇಹಿತರಿಗೂ ಮಾಹಿತಿ ನೀಡಿದರು. ಹಾಗಾಗಿ ವಾರದೊಳಗೆ ವ್ಯಾಪಾರ ಬಿರುಸು ಪಡೆಯಿತು. ಇದರಿಂದ ಖುಷಿಗೊಂಡ ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನ ಮಾಲಕ ಇಮ್ರಾನ್ ಅವರು ಖಾದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದರು.

ಈ ಬಾರಿಯೂ ಅಷ್ಟೇ ಉತ್ಸಾಹದಿಂದ ಸುಮಾರು 25 ಬಗೆಯ ಮುಂಬೈ ಶೈಲಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ಉಪವಾಸಿಗರ ಬಾಯಿರುಚಿ ತಣಿಸುತ್ತಿದ್ದಾರೆ. ಇಲ್ಲಿನ ‘ಚಿಕನ್ ಮತ್ತು ಮಟನ್ ಬೈದ ರೋಟಿ’ಗೆ ಗ್ರಾಹಕರಿಂದ ಉತ್ತಮ ಬೇಡಿಕೆಯಿದೆ. ಈ ಖಾದ್ಯವನ್ನು ಉಪವಾಸಿಗರ ಸಹಿತ ಎಲ್ಲ ಗ್ರಾಹಕರು ಹೆಚ್ಚು ಇಷ್ಟಪಡುತ್ತಿದ್ದು, ಇದು ಇದರ ಸ್ವಾದಕ್ಕೆ ಸಾಕ್ಷಿ.

ಜೊತೆಗೆ ಚಿಕನ್ ರೋಲ್, ಮಟನ್ ರೋಲ್, ರಬ್ದಿ ಫಲೂಡಾ, ಚಿಕನ್ ಸೀಕ್ ಕಬಾಬ್, ಮಟನ್ ಸೀಕ್ ಕಬಾಬ್, ಚಿಕನ್ ಸಮೋಸಾ, ಚಿಕನ್ ಚಟ್ನಿ ಕಬಾಬ್, ಚಿಕನ್ ರಷ್ಯನ್ ಕಬಾಬ್, ಚಿಕನ್ ಸ್ಟಿಕ್, ಚಿಕನ್ ಕಟ್ಲೆಟ್, ಮಟನ್ ಚಾಪ್ ಫ್ರೈ, ಮಟನ್ ಬೇಜಾ ಕಬಾಬ್, ಚಿಕನ್ ಲಾಲಿಪಾಪ್, ಚಿಕನ್ ಕ್ರಿಸ್ಸಿ, ಚಿಕನ್ ಥ್ರೆಡ್ ಕ್ರಿಸ್ಸಿ, ಚಿಕನ್ ಹುನೈನ್, ಚಿಕನ್ ಕ್ರೀಮ್ ಸಾಟೆ, ಚಿಕನ್ ಸಾಟೆ, ಚಿಕನ್ ಸ್ಟಿಕ್ ಮಿರ್ಚಿ, ಚಿಕನ್ ಕ್ಯಾಪ್ಸಿಕಾಮ್ ಸ್ಟಿಕ್, ಚಿಕನ್ ಚಿಲ್ಲಿ ಮಿಲ್ಲಿ ಇತ್ಯಾದಿ ಖಾದ್ಯಗಳಿವೆ.

ಅದಲ್ಲದೆ ಎಗ್‌ರೋಲ್, ಚಿಕನ್ ಪುದಿನ ಕಬಾಬ್, ಚಿಕನ್ ಟಿಕ್ಕ ಮಿರ್ಚಿ, ಚಿಕನ್ ಮಲಾಲ ಕಬಾಬ್ ಹಾಗೂ ನಾರ್ಮಲ್, ಚೀಸ್, ಒಲೈವ್, ರುಮಾಲಿ, ರುಮಾಲಿ ಚೀಸ್ ಸಹಿತ ಸುಮಾರು 24 ಬಗೆಯ ಶವರ್ಮ ಕೂಡ ಇದೆ. ದಿಲ್ಲಿ, ಹೈದರಾಬಾದ್, ಮುಂಬೈಯಲ್ಲಿ ಮನೆಮಾತಾದ "ಚಿಕನ್ ಸೇಝ್‌ವಾನ್ ತಂದೂರಿ", "ಮಟನ್ ರಿಬ್ಝ್", "ಆ್ಯಪಲ್ ಲಾಲಿಪಾಪ್" ಕೂಡ ಇಲ್ಲಿ ಲಭ್ಯವಿವೆ.

ಮುಸ್ಲಿಮೇತರರಿಗೂ ಪ್ರಿಯ: ‘ಟೌನ್ ಟೇಬಲ್ಸ್ ರೆಸ್ಟೋರೆಂಟ್’ನ ಮುಂದೆ ಡೆಮೋ ನಿರ್ಮಿಸಿ ತಯಾರಿಸಲಾದ ರಮಝಾನ್ ಸ್ಪೆಷಲ್ ಖಾದ್ಯಗಳನ್ನು ಮುಸ್ಲಿಮೇತರರು ಕೂಡ ಹೆಚ್ಚು ಇಷ್ಟಪಟ್ಟು ಕೊಂಡೊಯ್ಯುತ್ತಿದ್ದಾರೆ. ಈ ರಸ್ತೆಯಾಗಿ ಸಾಗುವ ದಾರಿಹೋಕರು, ವಾಹನಿಗರು ಅದರಲ್ಲೂ ಮುಸ್ಲಿಮೇತರರು ರಮಝಾನ್ ಸ್ಪೆಷಲ್ ಖಾದ್ಯಗಳನ್ನು ಖರೀದಿಸಿ ಗಮನ ಸೆಳೆಯುತ್ತಿದ್ದಾರೆ.

ಫೋರಂ ಫಿಝಾ ಮಾಲ್‌ನಲ್ಲೂ: ಇಲ್ಲಿನ ರುಚಿ ರುಚಿಯಾದ ಖಾದ್ಯಗಳಿಗೆ ಮಾರು ಹೋದ ಗ್ರಾಹಕರ ಬೇಡಿಕೆಯಂತೆ ಮತ್ತು ಫೋರಂ ಫಿಝಾ ಮಾಲ್‌ನ ಪ್ರವರ್ತಕರ ಕೋರಿಕೆಯ ಮೇರೆಗೆ ರಮಝಾನ್ ಸ್ಪೆಷಲ್ ಖಾದ್ಯಗಳ ಮಾರಾಟ ಕೌಂಟರನ್ನು ಪಾಂಡೇಶ್ವರದ ಫಿಝಾ ಮಾಲ್‌ನಲ್ಲೂ ತೆರೆಯಲಾಗಿದೆ.

"ಕಳೆದ ವರ್ಷ ನಾನು ಅಚಾನಕ್ ಆಗಿ ಈ ರಸ್ತೆಯಾಗಿ ಸಾಗುತ್ತಿದ್ದಾಗ ಜನರು ಮುಗಿಬಿದ್ದಿರುವುದು ಕಂಡು ಬಂತು. ತಕ್ಷಣ ವಾಹನ ನಿಲ್ಲಿಸಿದಾಗ ರಮಝಾನ್ ಸ್ಪೆಷಲ್ ಖಾದ್ಯಗಳು ಕಂಡು ಬಂತು. ಆಯ್ದ ಒಂದೆರಡು ಖಾದ್ಯಗಳನ್ನು ಪಾರ್ಸಲ್ ಮಾಡಿಕೊಂಡು ಮನೆಗೆ ಹೋದೆ. ಆ ಬಳಿಕ ಒಂದೆರಡು ಬಾರಿ ಕುಟುಂಬ ಸಮೇತ ಈ ರೆಸ್ಟೋರೆಂಟ್‌ಗೆ ಬಂದಿದ್ದೇನೆ. ಇದೀಗ ರಮಝಾನ್ ಸ್ಪೆಷಲ್‌ಗಾಗಿ ಮತ್ತೆ ಬಂದಿದ್ದೇನೆ. ಇಲ್ಲಿನ ಖಾದ್ಯಗಳ ರುಚಿಯೇ ಬೇರೆ. ಈ ಬಾರಿ ಎಲ್ಲ ಖಾದ್ಯಗಳ ರುಚಿ ನೋಡಬೇಕು ಅಂತ ಇಚ್ಛಿಸಿದ್ದೇನೆ" ಎನ್ನುತ್ತಾರೆ ಗ್ರಾಹಕ ಮಂಗಳೂರಿನ ಝುಲ್ಫಿಕರ್.

"ಸಮಯದ ಅಭಾವದಿಂದ ರಮಝಾನ್ ಸ್ಪೆಷಲ್ ಖಾದ್ಯಗಳನ್ನು ಡೋರ್ ಡೆಲಿವರಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಲಾಗುವುದು" ಎಂದು ಮುಂಬೈಯ ಇಮ್ರಾನ್ ರಿಗೆ ಈ ವ್ಯವಹಾರದಲ್ಲಿ ಸಾಥ್ ನೀಡುತ್ತಿರುವ ಮಂಗಳೂರಿನ ನಿಸಾರ್ ಹೇಳುತ್ತಾರೆ.

"ಹಲವು ವರ್ಷಗಳಿಂದ ಮುಂಬೈಯಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನಾನು ಶುಚಿ-ರುಚಿಯಾದ ಆಹಾರವನ್ನು ಗ್ರಾಹಕರಿಗೆ ಪೂರೈಸುತ್ತಾ ಬಂದ ಕಾರಣ ಮಂಗಳೂರಿನಲ್ಲೂ ಮುಂಬೈ ಶೈಲಿಯ ತಿಂಡಿ-ತಿನಿಸುಗಳನ್ನು ನೀಡಲು ಸಾಧ್ಯವಾಯಿತು. ಇಲ್ಲಿಗೆ ಮಂಗಳೂರು ಮಾತ್ರವಲ್ಲದೆ ಉಡುಪಿ, ಕಾಸರಗೋಡಿನ ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರುಚಿ ಮಾತ್ರವಲ್ಲ ಶುಚಿಗೂ ಆದ್ಯತೆ ನೀಡುವ ಕಾರಣ ಗ್ರಾಹಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿದೆ" ಎಂದು ಇಮ್ರಾನ್ ಹೇಳುತ್ತಾರೆ.

ಮುಂಬೈ ಖಾದ್ಯ ವಿಶೇಷಗಳ ಹೋಟೆಲ್: ಟೌನ್ ಟೇಬಲ್ಸ್ ಮುಂಬೈ ಖಾದ್ಯಗಳಿಗೆ ಈಗಾಗಲೇ ಮಂಗಳೂರಿನಲ್ಲಿ ಹೆಸರುವಾಸಿಯಾಗಿದೆ. ಮುಂಬೈಯ ಪ್ರಖ್ಯಾತ  ಶೀಕ್ ಕಬಾಬ್ ಗಳು, ವೈವಿಧ್ಯಮಯ ಮಟನ್ , ಚಿಕನ್ ,  ಖೀಮಾ ಖಾದ್ಯಗಳು, ಶವರ್ಮಾ , ಫಿರ್ನಿ , ಫಾಲೂದಗಳ  ಮೂಲಕ ಈ ಹೋಟೆಲ್ ಈಗಾಗಲೇ ಜನರನ್ನು ಆಕರ್ಷಿಸಿದೆ. "ಕುಟುಂಬದ ಜೊತೆ ಊಟಕ್ಕೆ ಹೋಗಲು ಹಾಗು ಮಂಗಳೂರಿನಲ್ಲಿ ಅತ್ಯುತ್ತಮ ಮುಂಬೈ ಖಾದ್ಯಗಳನ್ನು ಸವಿಯಲು ಟೌನ್ ಟೇಬಲ್ಸ್ ಆದ್ಯತೆಯ ರೆಸ್ಟೋರೆಂಟ್ ಆಗಿ ಬೆಳೆದಿದೆ.  ರಮಝಾನ್ ಬಳಿಕ ಎಂದಿನಂತೆ ಈ ಎಲ್ಲ ಐಟಂಗಳು ಲಭ್ಯವಿರುತ್ತವೆ " ಎಂದು ಇಮ್ರಾನ್ ತಿಳಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X