ತಲಪಾಡಿ ಗ್ರಾಪಂ ಕಚೇರಿ ಮುಂದೆ ಕಸ ಸುರಿದ ಗ್ರಾಮಸ್ಥ

ಮಂಗಳೂರು, ಜೂ.1: ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗದ ನಿರ್ಲಕ್ಷ್ಯತನದಿಂದ ಬೇಸತ್ತ ವ್ಯಕ್ತಿಯೊಬ್ಬರು ತಲಪಾಡಿ ಗ್ರಾಪಂ ಮುಂಭಾಗದಲ್ಲಿ ತ್ಯಾಜ್ಯ ಸುರಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಲಪಾಡಿಯ ಕೆ.ಸಿ.ರೋಡ್ ಎಂಬಲ್ಲಿ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಚರಂಡಿಯಿಂದ ಹೂಳೆತ್ತುವ ಕೆಲಸ ಕೆಲವು ದಿನಗಳ ಹಿಂದೆ ನಡೆದಿತ್ತು. ಈ ಸಂದರ್ಭ ಹೂಳೆತ್ತಿದ್ದ ಮಣ್ಣನ್ನು ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಎಂಬವರ ಮನೆಯ ಮುಂಭಾಗದಲ್ಲಿ ರಾಶಿ ಹಾಕಲಾಗಿತ್ತು. ಬಳಿಕ ಸಾರ್ವಜನಿಕರು ಇದೇ ಜಾಗದಲ್ಲಿ ತ್ಯಾಜ್ಯ ಎಸೆದು ಹೋಗಲು ಆರಂಭಿಸಿದ್ದರಿಂದ ಸ್ಥಳೀಯವಾಗಿ ರೋಗಭೀತಿ ಆವರಿಸಿದೆ.
ಈ ಬಗ್ಗೆ ಸಂಬಂಧಪಟ್ಟವರಿಗೆ ದೂರಿ ನೀಡಿದರೂ ಪ್ರಯೋಜನವಾಗದ ಕಾರಣ ಗ್ರಾಪಂ ಕಚೇರಿ ಮುಂದೆ ತ್ಯಾಜ್ಯ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





