ಜೂ. 3: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ
ಮಂಗಳೂರು, ಜೂ.1: ನಗರದ ಕೆರಿಯರ್ ಗೈಡೆನ್ಸ್ ಆ್ಯಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಜೂ. 3ರಂದು ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಂಡಿದೆ.
ನಗರದ ಕೊಟ್ಟಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಬೆಳಗ್ಗೆ 9:30ಕ್ಕೆ ಶಿಬಿರ ಆರಂಭಗೊಳ್ಳಲಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋ ಹಾಗೂ ಬಿಇ, ಬಿಟೆಕ್, ಬಿಎಸ್ಸಿಗಳ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್‌ಲೈನ್ ಸಿಇಟಿ/ ನೀಟ್ ಕೌನ್ಸಿಲಿಂಗ್‌ನ ವಿಧಾನ, ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಅಗತ್ಯ ಕಾಗದ ಪತ್ರಗಳು, ಸೀಟುಗಳ ಆಯ್ಕೆ ಪ್ರಕಿೃಯೆ ಮತ್ತು ಇತರ ಪೂರಕ ಮಾಹಿತಿ ನೀಡಲಾಗುವುದು.
ಪ್ರವೇಶ ಉಚಿತವಾಗಿದ್ದು, ಆಸಕ್ತರು ದೂ. ಸಂ. 9845054191ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದೆಂದು ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





