ಬಾಲಮಂದಿರದಿಂದ ಬಾಲಕ ನಾಪತ್ತೆ

ಮಂಗಳೂರು, ಜೂ. 1: ಬೆಂದೇಲ್‌ನ ಬಾಲಮಂದಿರದಿಂದ ಬಾಲಕನೋರ್ವ ನಾಪತ್ತೆಯಾಗಿದ್ದು, ಪತ್ತೆಗೆ ಮನವಿ ಮಾಡಲಾಗಿದೆ. ಮಹ್ಮೂದ್ (15) ಎಂಬ ಬಾಲಕನನ್ನು ಮೇ 31ರಂದು ಮಂಗಳೂರಿನ ಚೈಲ್ಡ್‌ಲೈನ್‌ನವರು ನಗರದ ಕಂಕನಾಡಿ ರೈಲ್ವೆ ಸ್ಟೇಶನ್‌ನಲ್ಲಿ ಪತ್ತೆ ಹಚ್ಚಿ ನಗರದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.
ಕಲ್ಯಾಣ ಸಮಿತಿಯವರು ಬಾಲಕನನ್ನು ಬೊಂದೇಲ್‌ನ ಬಾಲ ಮಂದಿರಕ್ಕೆ ದಾಖಲಿಸಿದ್ದರು. ಆದರೆ ಗುರುವಾರ ಮುಂಜಾನೆ 1ರಿಂದ 1:30ರ ನಡುವೆ ಬಾಲಕ ಬಾಲಮಂದಿರದಿಂದ ಕಾಣೆಯಾಗಿದ್ದಾನೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾಗಿರುವ ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಕಾವೂರು ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸುವಂತೆ ಕೋರಲಾಗಿದೆ. 0824-2220599 ಅಥವಾ 2220526 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





