ಜಿಲ್ಲೆಗೆ 2 ಮೊಬೈಲ್ ಮೆಡಿಕಲ್ ಯುನಿಟ್ ಮಂಜೂರು

ಉಡುಪಿ, ಜೂ.1: ಉಡುಪಿ ಜಿಲ್ಲೆಗೆ ಎರಡು ಮೊಬೈಲ್ ಮೆಡಿಕಲ್ ಯುನಿಟ್ ಮಂಜೂರು ಆಗಿದ್ದು, ಇವುಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಚಾಲನೆ ನೀಡಿದರು
ಇದರಲ್ಲಿ ಒಂದು ಯುನಿಟ್ ಕುಂದಾಪುರ ತಾಲೂಕಿನ ಹೆಂಗವಳ್ಳಿ, ಮಡಾಮಕ್ಕಿ, ಅಮಾಸೆಬೈಲು ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದ್ದು, ಇನ್ನೊಂದು ಕಾರ್ಕಳ ತಾಲೂಕಿನ ನಾಡ್ಪಾಲು, ಹೆಬ್ರಿ, ವರಾಂಗ, ಶಿರ್ಲಾಲು, ಈದು ಆಸುಪಾಸಿನಲ್ಲಿ ಕರ್ತವ್ಯ ನಿರ್ವಹಿಸಲಿದೆ.
ಮೊಬೈಲ್ ಮೆಡಿಕಲ್ ಯುನಿಟ್‌ಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಯುನಿಟ್ ಗಳು ಕರ್ತವ್ಯ ನಿರ್ವಹಿಸುವ ವೇಳೆ ಅನಿರೀಕ್ಷಿತ ಭೇಟಿ ನೀಡಿ ಕಾರ್ಯನಿರ್ವಹಣೆ ಯನ್ನು ಪರಿಶೀಲಿಸುವುದಾಗಿ ಅವರು ಹೇಳಿದರು.
Next Story





