ಸರಣಿ ದರೋಡೆ
ಬೆಂಗಳೂರು, ಜೂ.1: ಕಟ್ಟಡವೊಂದರಲ್ಲಿದ್ದ ಏಳು ಅಂಗಡಿಗಳ ಮೇಲ್ಛಾವಣಿ ಮುರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾಗೂ ಹಣವನ್ನು ದೋಚಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸುರಭಿ ಲೇಔಟ್‌ನಲ್ಲಿ ಗುರುವಾರ 2 ಗಂಟೆ ಸುಮಾರಿಗೆ ಡಾ.ಮಲ್ಲಿಕಾರ್ಜುನ್ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ಮೊಬೈಲ್, ಚಪ್ಪಲಿ, ಪೈಂಟ್ ಅಂಗಡಿ, ಪ್ರಾವಿಷನ್ ಸ್ಟೋರ್, ಸ್ವೀಟ್ ಸ್ಟಾಲ್ ಹಾಗೂ ಇನ್ನಿತರ ಅಂಗಡಿಗಳಿದ್ದು, ದುಷ್ಕರ್ಮಿಗಳು ಮೇಲ್ಛಾವಣಿಯನ್ನು ಮುರಿದು ಹಾನಿಗೊಳಿಸಿ ಒಳಗಿಳಿದಿದ್ದಾರೆ. ನಂತರ ಅಂಗಡಿಯೊಳಗಿದ್ದ ವಸ್ತುಗಳನ್ನೆಲ್ಲ ದೋಚಿಕೊಂಡಿದ್ದಲ್ಲದೆ ಹಣವನ್ನೂ ಕಳವು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 8:30 ಸುಮಾರಿಗೆ ಅಂಗಡಿಗಳ ಮಾಲಕರು ಬಾಗಿಲು ತೆರೆಯಲು ಬಂದಾಗಲೇ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಯಲಹಂಕ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಅಂಗಡಿಗಳ ಮಾಲಕರಿಂದ ಕಳುವಾಗಿರುವ ವಸ್ತುಗಳ ವಿವರ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





