ಸಾಸ್ತಾನ ಮಿತ್ರರಿಂದ ಬೀಜದುಂಡೆ ವಿತರಣೆ

ಉಡುಪಿ, ಜೂ.2: ಪರಿಸರ ಹಸಿರುಗೊಳಿಸುವ ನೆಲೆಯಲ್ಲಿ ಸಾಸ್ತಾನ ಮಿತ್ರ ಬಳಗ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿವಿಧ ಜಾತಿಯ ಮರಗಳ ಬೀಜಗಳನ್ನು ಬಳಸಿಕೊಂಡು, ಕೆಮ್ಮಣ್ಣು ಗೋಮಯಗಳ ಮಿಶ್ರಣದಿಂದ ತಾವೇ ತಯಾರಿಸಿದ (ಸೀಡ್ ಬಾಲ್) ಬೀಜದುಂಡೆಗಳನ್ನು ಪರಿಸರ ಪ್ರೇಮಿಗಳಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಅವರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಕಚೇರಿಯಲ್ಲಿ ಸಾಸ್ತಾನ ಮಿತ್ರಬಳಗದ ಪರಿಸರಪ್ರೇಮಿ ವಿನಯಚಂದ್ರ 100 ಬೀಜದುಂಡೆಗಳನ್ನು ವಿತರಿಸಿದರು.
ಆ ಸಂದರ್ಭ ಸಮಾಜಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು. ತಾರಾನಾಥ್ ಮೇಸ್ತ ಅವರು ಈ ಬೀಜದುಂಡೆಗಳನ್ನು ಶಿರೂರು ಅರಣ್ಯಪ್ರದೇಶದಲ್ಲಿ ಬಿತ್ತನೆ ಮಾಡಲಿದ್ದಾರೆ.
Next Story