ಹರ್ಯಾಣ,ಉತ್ತರ ಭಾರತದಲ್ಲಿ ಭೂಕಂಪ

ಹೊಸದಿಲ್ಲಿ,ಜೂ.2: ಮಧ್ಯಮ ಪ್ರಮಾಣದ ಭೂಕಂಪ ಶುಕ್ರವಾರ ನಸುಕಿನ 4:25ಕ್ಕೆ ಹರ್ಯಾಣದಲ್ಲಿ ಸಂಭವಿಸಿದ್ದು, ದಿಲ್ಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಕಂಪನ ಅನುಭವಕ್ಕೆ ಬಂದಿತ್ತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.0ರಷ್ಟಿತ್ತು.
ಭೂಕಂಪದ ಕೇಂದ್ರಬಿಂದು ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಿ 22 ಕಿ.ಮೀ. ಆಳದಲ್ಲಿ ಸ್ಥಿತಗೊಂಡಿತ್ತು ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಭೂಕಂಪದಿಂದ ಯಾವುದೇ ಸಾವುನೋವು ಅಥವಾ ಆಸ್ತಿಹಾನಿ ಸಂಭವಿಸಿರುವುದು ವರದಿಯಾಗಿಲ್ಲ.
Next Story





