ಜೂ.11ರಂದು ವರ್ತಕರ ಸಮಾವೇಶ
ಉಡುಪಿ, ಜೂ.2: ಉಡುಪಿ ಜಿಲ್ಲಾ ವರ್ತಕರ ಸಂಘದ ವತಿಯಿಂದ ಜಿಲ್ಲಾ ವರ್ತಕರ ಸಮಾವೇಶವನ್ನು ಜೂ.11ರಂದು ಅಪರಾಹ್ನ 3ಗಂಟೆಗೆ ಅಂಬಲ ಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ.
ದೇವಳದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಸಮಾವೇಶವನ್ನು ಉದ್ಘಾ ಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ.ರಘುಪತಿ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ.
ಉತ್ತಮ ವರ್ತಕ ಪ್ರಶಸ್ತಿ, ವಿವಿಧ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story





